ಅನುಕಂಪರಹಿತ ಜೀವನಕ್ಕೆ ಆದ್ಯತೆ: ಗ್ರಾ.ಪಂ.ಅಧ್ಯಕ್ಷೆ ಶಶಿಕಲಾ ಮಾಹಿತಿ

Mul_Anukampa
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಅಂಗವಿಕಲರು ಮತ್ತು ಹಿರಿಯ ನಾಗರಿಕರು ಸ್ವಾವಲಂಬಿಯಾಗಿ ಯಾವುದೇ ಅನುಕಂಪರಹಿತವಾಗಿ ಜೀವಿಸಲು ಸರ್ಕಾರ ಬಹಳಷ್ಟು ಸವಲತ್ತುಗಳನ್ನು ನೀಡುತ್ತಿದ್ದು, ಈ ಬಗ್ಗೆ ಸೂಕ್ತ ಮಾಹಿತಿ ಪಡೆದು ಗ್ರಾಮಸಭೆಯಶಸ್ವಿಗೊಳಿಸಬೇಕು ಎಂದು ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಹೇಳಿದರು.

ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಅಂಗವಿಕಲರ ಗ್ರಾಮಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.

ಅಂಗವಿಕಲರಿಗೆ ದೊರಕುವ ಸವಲತ್ತುಗಳನ್ನು ಒದಗಿಸಲು ಗ್ರಾಮ ಪಂಚಾಯಿತಿ ಮೂಲಕ ಪೂರ್ಣ ಸಹಕಾರ ನೀಡುತ್ತಿದ್ದು, ಮುಂದೆಯೂ ಇಂತಹ ಕಾರ್ಯಕ್ರಮಗಳ ಪ್ರಯೋಜನ ಗ್ರಾಮದ ಅಂಗವಿಕಲರು ಪಡೆಯಬೇಕು ಎಂದರು.

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮುಖಾಂತರ ದೊರಕುವ ಸವಲತ್ತುಗಳ ಕುರಿತು ಜಯಪ್ರಕಾಶ್ ಎಂ.ಆರ್.ಡಬ್ಲುೃ. ಮಾಹಿತಿ ನೀಡಿದರು.

2024-25ನೇ ಸಾಲಿನ ಸ್ವಂತ ನಿಧಿ ಯೋಜನೆಯ ಶೇ.5ರ ಅನುದಾನದಡಿ ಒಟ್ಟು 52 ಅಂಗವಿಕಲರಿಗೆ ವೈದ್ಯಕೀಯ ಸಹಾಯಧನ ವಿತರಿಸಲಾಯಿತು ಹಾಗೂ ಮೂಲ್ಕಿ ತಾಲೂಕು ಪಂಚಾಯಿತಿ ಅನುದಾನದಿಂದ 30 ಸಾವಿರ ರೂ.ನ ಶ್ರವಣ ಸಾಧನವನ್ನು ವಿತರಿಸಲಾಯಿತು.

ಸದಸ್ಯರಾದ ಪದ್ಮಿನಿ, ಜ್ಯೋತಿ ಆಚಾರ್ಯ, ಗೀತಾ, ಜಯಕುವಾರ್ , ದಯಾನಂದ, ವಿಆರ್‌ಡಬ್ಲುೃ ಅಶ್ವಿತಾ, ಸಿಬ್ಬಂದಿ ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೈಲಜಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net