ಅನುಭವದ ನಡೆಯಿಂದ ಯಶಸ್ಸು: ಬೋಳ ಪ್ರಭಾಕರ ಕಾಮತ್ ಅಭಿಮತ

Mbd_Experience
Published on

ಮೂಡುಬಿದಿರೆ: ಗೇರು ಉದ್ಯಮ ಏರುಪೇರಿನ ನಡೆ ಹೊಂದಿದ್ದು, ಇಲ್ಲಿ ಎಚ್ಚರಿಕೆಯ ಅನುಭವದ ನಡೆಯಿಂದ ಯಶಸ್ಸು ಕಾಣಲು ಸಾಧ್ಯ. ಯುವ ಉದ್ಯಮಿಗಳು ಅನುಭವದ ಕೊರತೆಯನ್ನು ಮೆಟ್ಟಿ ನಿಂತಾಗ ಸಾಧನೆ ವಾಡಲು ಸಾಧ್ಯ ಎಂದು ಹಿರಿಯ ಗೇರು ಉದ್ಯಮಿ ಬೋಳ ಪ್ರಭಾಕರ ಕಾಮತ್ ನುಡಿದರು.

ಮೂಡುಬಿದಿರೆಯ ಶ್ರೀ ಧನಲಕ್ಷ್ಮೀ ಕ್ಯಾಶ್ಯೂಸ್ ಆವರಣದಲ್ಲಿ ಕರ್ನಾಟಕ ಗೇರು ಉತ್ಪಾದಕರ ಅಸೋಸಿಯೇಶನ್ ವತಿಯಿಂದ ಸನ್ಮಾನ ಸ್ವೀಕರಿಸಿ ವಾತನಾಡಿದರು. ರಾಜ್ಯದ ಬೊಕ್ಕಸಕ್ಕೆ ಆದಾಯ, ಉದ್ಯೋಗದಾತರಾಗಿರುವ ಗೇರು ಉತ್ಪಾದಕರನ್ನು ಸರ್ಕಾರ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.

ಗೌರವ ಸ್ವೀಕರಿಸಿ ವಾತನಾಡಿದ ಇನ್ನೋರ್ವ ಉದ್ಯಮಿ ಶ್ರೀ ಧನಲಕ್ಷ್ಮೀ ಕ್ಯಾಶ್ಯೂಸ್‌ನ ಕೆ.ಶ್ರೀಪತಿ ಭಟ್ ಸಮತೋಲನದಿಂದ ಸಾಧನೆ, ಯಶಸ್ಸು ಸಾಧ್ಯ ಎಂದರು.

ಶ್ರೀ ಧನಲಕ್ಷ್ಮೀ ಕ್ಯಾಶ್ಯೂಸ್ ಸಂಸ್ಥೆ ವತಿಯಿಂದ ಕೆ.ಸಿ.ಎಂ.ಎ. ಅಧ್ಯಕ್ಷ ಅನಂತಕೃಷ್ಣ ರಾವ್ ಅವರನ್ನು ಗೌರವಿಸಲಾಯಿತು.

ಕೆ.ಸಿ.ಎಂ.ಎ. ಅಧ್ಯಕ್ಷ ಅನಂತಕೃಷ್ಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಕರಾವಳಿಯಲ್ಲಿ ಗೇರು ಉದ್ಯಮದ ಶತವಾನೋತ್ಸವ ಸಂಭ್ರಮ ಕಾಣುತ್ತಿರುವ ಮುಂದಿನ ವರ್ಷ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ಅರ್ಥಪೂರ್ಣ ಸಮ್ಮೇಳನ ನಡೆಸುವ ಯೋಜನೆಯಿದೆ ಎಂದರು.

ಅಧ್ಯಕ್ಷತೆ ವಹಿಸಿ ವಾತನಾಡಿದ ಅಖಿಲ ಭಾರತ ಗೇರು ಉದ್ಯಮಿಗಳ ಸಂಟನೆ ಅಧ್ಯಕ್ಷ ಬೋಳ ರಾಹುಲ್ ಕಾಮತ್ ಉಪಸ್ಥಿತರಿದ್ದರು.

ಕೆಸಿಎಂಎ ಕಾರ್ಯದರ್ಶಿ ಅಮಿತ್ ಪೈ ಸಂಟನೆಯ ತ್ರೈವಾಸಿಕ ವರದಿ ವಾಚಿಸಿದರು. ಕ್ಯಾಶ್ಯೂ ಇನ್ಫೋದ ಶ್ರೀವಾಸ್ತವ ಅವರು ದುಬೈನಲ್ಲಿ ಮುಂದಿನ ಫ್ರೆಬ್ರವರಿಯಲ್ಲಿ ಜರಗಲಿರುವ ವಿಶ್ವ ಗೇರು ಸಮ್ಮೇಳನದ ಕುರಿತು ವಾಹಿತಿ ನೀಡಿದರು.

ಕೆಸಿಎಂಎ ನಿರ್ವಾಹಕ ಗಂಗಾಧರ್ ನಿರೂಪಿಸಿದರು. ಜತೆ ಕಾರ್ಯದರ್ಶಿ ಸನತ್ ಪೈ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net