ಸಂಘಟನೆಗಳಿಂದ ಹಿಂದು ಸಮಾಜಕ್ಕೆ ಶಕ್ತಿ: ಸಂಸದ ಕ್ಯಾ.ಬ್ರಿಜೇಶ್ ಚೌಟ ಕರೆ

Btw_Hindu society
Published on

ಬಂಟ್ವಾಳ: ಸಂಟನೆಗಳು ಹಿಂದು ಸಮಾಜಕ್ಕೆ ಶಕ್ತಿ ತುಂಬುವ ಕಾರ್ಯಕ್ಕೆ ಮುಂದಾಗಬೇಕು. ಜನಜಾಗೃತಿಗಾಗಿ ಶ್ರಮಿಸಬೇಕಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ತುಂಬೆ ಗ್ರಾಮದ ರಾಮಲ್‌ಕಟ್ಟೆಯ ಎಳೆಯರ ಬಳಗ ಮತ್ತು ಎಳೆಯರ ಬಳಗ ಮಹಿಳಾ ಮಂಡಳಿ ವಾರ್ಷಿಕ ಪೂಜಾ ಮಹೋತ್ಸವ ಹಾಗೂ ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯ ಅತಿಥಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಮಾತನಾಡಿ, ಮಾನವ ಧರ್ಮ ಶ್ರೇಷ್ಠ, ನಮ್ಮೊಂದಿಗೆ ಇನ್ನೊಬ್ಬರಿಗೂ ಒಳಿತಾಗಲಿ ಎನ್ನುವ ಗುಣ ನಮ್ಮಲ್ಲಿರಲಿ. ಸಮಾಜದಲ್ಲಿ ಸುಖ ಶಾಂತಿ ನೆಲೆಸಲಿ ಎಂದು ಶುಭ ಹಾರೈಸಿದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುವಾರ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ವಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಹಾಗೂ ಸಾಧಕ ಮನೋಜ್ ಕನಪಾಡಿ ಅವರನ್ನು ಸನ್ಮಾನಿಸಲಾಯಿತು. ಕುಣಿತ ಭಜನಾ ಗುರುಗಳಾದ ಚಿತ್ತರಂಜನ್ ಹಾಗೂ ಸಂದೀಪ್, ನಾಟಕ ಕಲಾವಿದ ಪ್ರವೀಣ್ ಕೊಡಕ್ಕಲರನ್ನು ಗೌರವಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಮನಪಾ ಸದಸ್ಯೆ ಚಂದ್ರಾವತಿ, ತುಂಬೆ ಗ್ರಾ.ಪಂ. ಸದಸ್ಯ ಗಣೇಶ್ ಸಾಲ್ಯಾನ್, ವೈದ್ಯನಾಥ ದೈವಸ್ಥಾನದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಜೋತಿಷಿ ಅನಿಲ್ ಪಂಡಿತ್ ಬ್ರಹ್ಮರಕೂಟ್ಲು, ತುಂಬೆ ಶಿಕ್ಷಣ ಸಂಸ್ಥೆಯ ಶಿಕ್ಷಕ-ರಕ್ಷಕ ಸಂದ ಅಧ್ಯಕ್ಷ ನಿಸಾರ್ ಅಹ್ಮದ್ ವಳವೂರು, ಎಳೆಯರ ಬಳಗದ ಅಧ್ಯಕ್ಷ ಪೂಜೇಶ್ ಆಚಾರ್ಯ ರಾಮಲ್‌ಕಟ್ಟೆ ಉಪಸ್ಥಿತರಿದ್ದರು. ನಿಶ್ಮಿತಾ ಸ್ವಾಗತಿಸಿದರು. ಧನ್ಯ ಬಹುಮಾನಿತರ ಪಟ್ಟಿ ವಾಚಿಸಿದರು. ಉಮೇಶ್ ಕುಮಾರ್ ರೆಂಜೋಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net