ಕೇರಳ, ತಮಿಳುನಾಡಿಗೆ ತನಿಖಾ ತಂಡ

Channagiri, Police, Complaint, Robbery,
Published on

ವಿಟ್ಲ: ಬೋಳಂತೂರು ನಾರ್ಶ ಉದ್ಯಮಿ ಸುಲೈಮಾನ್ ಹಾಜಿ ಮನೆ ದರೋಡೆ ಪ್ರಕರಣವನ್ನು ಭೇದಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಗಲಿರುಳು ತನಿಖೆ ಮುಂದುವರಿಸಿದೆ. ಬ್ರೇಕ್‌ಥ್ರೂ ಆಗುವಂತಹ ಯಾವುದೇ ಪ್ರಗತಿಯನ್ನು ಕಾಣದಿದ್ದರೂ, ದರೋಡೆಕೋರರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹ ನಡೆಯುತ್ತಿದೆ.

ಕೇರಳ, ತಮಿಳುನಾಡು ಭಾಗದ ವಿವಿಧ ಕಡೆಗೆ ತಂಡಗಳು ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡುತ್ತಿದೆ. ಆಧುನಿಕ ಸಿಸಿ ಕ್ಯಾಮರಾಗಳು ದಕ್ಷಿಣ ಕನ್ನಡ ಯಾವ ರಸ್ತೆಗಳಿಗೂ ಅಳವಡಿಸದ ಕಾರಣದಿಂದ ಕಾರಿನ ಸಂಖ್ಯೆಯನ್ನು ಪತ್ತೆ ಹಚ್ಚುವುದು ಸವಾಲಾಗಿದೆ.

ದರೋಡೆ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ಮಹತ್ವದ ಸುಳಿವು ಲಭಿಸಿಲ್ಲ. ಎಲ್ಲ ಆಯಾಮಾಗಳಲ್ಲಿ ತನಿಖೆ ನಡೆಯುತ್ತಿದೆ, ಕೆಲವು ಮಾಹಿತಿಗಳು ಊಹಾಪೂಹಗಳಿಂದ ಕೂಡಿದ್ದು, ಖಚಿತ ಮಾಹಿತಿ ಸಿಕ್ಕಾಗ ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು ಪೊಲೀಸ್ ವರಿಷ್ಠಾಽಕಾರಿ ಯತೀಶ್ ಎನ್. ತಿಳಿಸಿದ್ದಾರೆ.

ವಿದೇಶಕ್ಕೆ ಹಾರಿತಾ ತಂಡ?

ದರೋಡೆ ಪ್ರಕರಣ ನಡೆದು ವಾರ ಕಳೆಯುತ್ತಾ ಬಂದಿದ್ದು, ಯಾವುದೇ ಸುಳಿವನ್ನೂ ಬಿಡದೆ ವ್ಯವಸ್ಥಿತವಾಗಿ ಕೃತ್ಯ ಎಸಗಿದ್ದಾರೆ. ಭಾರಿ ಮೊತ್ತ ಕೈಸೇರಿದ ಬಳಿಕ ತಂಡದ ಸದಸ್ಯರು ಸದ್ದಿಲ್ಲದೆ ವಿದೇಶಕ್ಕೆ ಹಾರಿದ್ದಾರಾ ಎಂಬ ಮಾತುಗಳೂ ಕೇಳಿ ಬರುತ್ತಿದೆ. ವಿದೇಶಕ್ಕೆ ಹೋದವರ ಮಾಹಿತಿಗಳನ್ನು ಸಂಗ್ರಹಿಸುವ ಕಾರ್ಯ ನಡೆಸಬೇಕೆಂಬ ಆಗ್ರಹ ಕೇಳಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net