ಹ್ಯಾಕರ್​ ಶ್ರೀಕಿ ಬಂಧನ ಆಗುವವರೆಗೂ ಇಷ್ಟು ಬುದ್ಧಿವಂತರಿದ್ದಾರೆ ಅನ್ನೋದೇ ಗೊತ್ತಿರಲಿಲ್ಲ: ಗೃಹಸಚಿವ

Araga
Published on

ಚಿಕ್ಕಬಳ್ಳಾಪುರ: ಹ್ಯಾಕರ್ ಶ್ರೀಕಿ ಬಂಧನ ಆಗುವವರೆಗೂ ಇಷ್ಟು ಬುದ್ಧಿವಂತರಿದ್ದಾರೆ ಎನ್ನುವುದೇ ಗೊತ್ತಿರಲಿಲ್ಲ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ. ಇಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ್ದ ವೇಳೆ ಅವರು ಈ ಮಾತನ್ನು ಹೇಳಿದರು.

ಇಲಾಖೆಯಲ್ಲಿ ಬುದ್ಧಿವಂತಿಕೆಯಿಂದ ಪ್ರಕರಣಗಳನ್ನು ಭೇದಿಸಿದ ಅಧಿಕಾರಿ-ಸಿಬ್ಬಂದಿಗೆ ಪ್ರಶಂಸಾಪತ್ರ ವಿತರಿಸುತ್ತ ಅವರು ಇಂಥದ್ದೊಂದು ಅನಿಸಿಕೆಯನ್ನು ಹಂಚಿಕೊಂಡರು. ಬಿಟ್ ಕಾಯಿನ್ ಧಂದೆಯ ಪ್ರಮುಖ ಆರೋಪಿ ಹ್ಯಾಕರ್ ಶ್ರೀಕಿಯ ಬಂಧನ ಆಗುವವರೆಗೂ ಇಷ್ಟು ಬುದ್ಧಿವಂತರಿದ್ದಾರೆ ಎನ್ನುವುದೇ ಗೊತ್ತಿರಲಿಲ್ಲ ಎಂದ ಗೃಹಸಚಿವರು, ನಮ್ಮ ಪೊಲೀಸರು ಅದಕ್ಕಿಂತಲೂ ಬುದ್ಧಿವಂತರಾಗಿರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಪೊಲೀಸರು ಕೊಲೆ ಸುಲಿಗೆ ದರೋಡೆ ಕಳ್ಳತನ ಪ್ರಕರಣಗಳನ್ನು ಭೇದಿಸುವುದರಿಂದ ಹಿಡಿದು ವಿನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಲ್ಲಿ ಮುಂದೆ ಇದ್ದಾರೆ ಎಂದು ಗೃಹ ಸಚಿವರು ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸರಿಗೆ ಪ್ರಶಂಶಾಪತ್ರಗಳನ್ನು ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಾತ್ರವಲ್ಲ ಹ್ಯಾಕರ್ ಶ್ರೀಕಿಗಿಂತಲೂ ಬುದ್ಧಿವಂತರಾದ ಪೊಲೀಸರು ನಮ್ಮ ಇಲಾಖೆಯಲ್ಲಿ ಇರಬೇಕು, ಪೊಲೀಸರು ಅಂಥವರಿಗಿಂತ ಬುದ್ಧಿವಂತರಾಗಿರಬೇಕು ಎಂದು ಬಯಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net