ಕೋಳಿ ಅಂಕಕ್ಕೆ ಪೊಲೀಸ್ ದಾಳಿ

Published on

ಬೆಳ್ತಂಗಡಿ: ಅಳದಂಗಡಿ ಸಮೀಪದ ಪಿಲ್ಯ ಅಲೆಕ್ಕಿ ಎಂಬಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ವೇಣೂರು ಪೊಲೀಸ್ ಠಾಣೆ ಉಪನಿರೀಕ್ಷಕ ಆನಂದ ಎಂ. ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೋಳಿ ಅಂಕದಲ್ಲಿ ನಿರತರಾಗಿದ್ದ ಪ್ರವೀಣ್ ಬಳಂಜ, ರಮೇಶ್ ಅಲೆಕ್ಕಿ, ಜೋಯೆಲ್ ಕರಂಬಾರು, ರಾಜೇಶ್ ಪೂಜಾರಿ ಸುಲ್ಕೇರಿಮೊಗ್ರು, ಅವಿನಾಶ್ ಕುದ್ಯಾಡಿ, ತೇಜಸ್ ಗರ್ಡಾಡಿ, ಸುಂದರ ಮಾಳ, ಮೇಘರಾಜ್ ಗರ್ಡಾಡಿ, ಉಮೇಶ್ ಬಡಗಕಾರಂದೂರು ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.

ಹೊಸಂಗಡಿ ಗ್ರಾಪಂ ಮರು ಚುನಾವಣಾ ಬಂದೋಬಸ್ತ್ ಕರ್ತವ್ಯದಲ್ಲಿರುವಾಗ ಲಭಿಸಿದ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಸ್ಥಳದಲ್ಲಿ 20-25 ಜನ ಗುಂಪು ಸೇರಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದ ವೇಳೆ ದಾಳಿ ನಡೆಸಿದ್ದು, ಈ ವೇಳೆ ಕೆಲವರು ಪರಾರಿಯಾಗಿದ್ದಾರೆ. 9 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಕೋಳಿ ಅಂಕದಲ್ಲಿ ಪಣವಾಗಿ ಇಟ್ಟಿದ್ದ 14,900 ರೂ., 5 ಬೇರೆ ಬೇರೆ ಗಾತ್ರದ ಹುಂಜ ಕೋಳಿ, ಎರಡು ಬಾಲುಕತ್ತಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net