ಮಂಗಳೂರಲ್ಲಿ ಮತ್ತೆ ತಿಮಿಂಗಿಲ ವಾಂತಿ ಮಾರಾಟ ಯತ್ನ; ಎರಡನೇ ಸಲವೂ ಕೋಟ್ಯಂತರ ರೂ. ಮೌಲ್ಯದ ಆ್ಯಂಬರ್ ಗ್ರೀಸ್ ವಶ

Amber greece
Published on

ಮಂಗಳೂರು: ಆ್ಯಂಬರ್ ಗ್ರೀಸ್ ಎಂದು ಕರೆಯಲಾಗುವ, ಭಾರಿ ಬೆಲೆಬಾಳುವ ತಿಮಿಂಗಿಲ ವಾಂತಿ ಮಾರಾಟ ಪ್ರಕರಣ ಹೆಚ್ಚಾಗುತ್ತಿದ್ದು, ಕರಾವಳಿಯಲ್ಲಿ ವಾರಗಳ ಅಂತರದಲ್ಲಿ ಅಂಥ ಎರಡು ಪ್ರಕರಣಗಳನ್ನು ಭೇದಿಸಿ, ಎರಡರಲ್ಲೂ ಕೋಟ್ಯಂತರ ರೂಪಾಯಿ ಮೌಲ್ಯದ ತಿಮಿಂಗಿಲ ವಾಂತಿ ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದು, ಆರೋಪಿಗಳಿಂದ 2.2 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ವಶಪಡಿಸಿಕೊಂಡಿದ್ದಾರೆ. ಎಂ.ಎ. ಜಾಬೀರ್, ವಿ.ಪಿ. ಆಸೀರ್, ಎನ್.ಶರೀಫ್​, ಎಲ್​.ಕೆ. ಶಬಾದ್ ಬಂಧಿತರು. ಆರೋಪಿಗಳು ಕೊಡಗು, ಕೇರಳ ಮೂಲದವರಾಗಿದ್ದು, ಮಂಗಳೂರಿನ ಕಂಕನಾಡಿ ಪೊಲೀಸರು ಇವರನ್ನು ನಗರದ ಜೆಪ್ಪಿನಮೊಗರು ಬಳಿ ಬಂಧಿಸಿದ್ದಾರೆ.

ವಾರಗಳ ಹಿಂದೆ ಕೊಣಾಜೆ ಠಾಣೆ ಪೊಲೀಸರು 3.48 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶಪಡಿಸಿಕೊಂಡಿದ್ದು, ಆರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಎರಡನೇ ಪ್ರಕರಣದಲ್ಲೂ ಕೋಟ್ಯಂತರ ರೂ. ಮೌಲ್ಯದ ತಿಮಿಂಗಲ ವಾಂತಿ ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net