More

    ರೈಲ್ವೆ ಪ್ಲ್ಯಾಟ್​ಫಾರ್ಮ್​ನಲ್ಲಿ ಸಿಲುಕಿದ ಬಾಲಕಿ; ನೆರವಿಗೆ ಧುಮುಕಿ ಜೀವ ಉಳಿಸಿದ ಲೋಕೋಪೈಲಟ್​

    ಬೆಳಗಾವಿ: ರೈಲಿಗೆ ಹತ್ತುವಾಗ ಅಥವಾ ಇಳಿಯುವಾಗ ಎಡವಟ್ಟಾಗಿ ಪ್ರಯಾಣಿಕರು ಪ್ರಾಣಾಪಾಯಕ್ಕೆ ಸಿಲುಕುವುದು, ತಕ್ಷಣ ಯಾರೋ ಸಹಾಯಕ್ಕೆ ಧಾವಿಸಿ ಸಾವಿನಿಂದ ಪಾರು ಮಾಡುವುದು ಆಗಾಗ ಕೇಳಿ ಬರುವಂಥ ಸುದ್ದಿಗಳೇ. ಅಂಥದ್ದೇ ಇನ್ನೊಂದು ಪ್ರಕರಣ ವರದಿಯಾಗಿದ್ದು, ಇಲ್ಲಿ ಬಾಲಕಿಯೊಬ್ಬಳನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.

    ಬೆಳಗಾವಿ ರೈಲು ಸ್ಟೇಷನ್​ನಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದ್ದು, ಲೋಕೋ ಪೈಲಟ್​ ಅನಿರ್ಬನ್ ಗೋಸ್ವಾಮಿ ಎಂಬವರು ಬಾಲಕಿಯೊಬ್ಬಳನ್ನು ಸಾವಿನಿಂದ ಪಾರು ಮಾಡಿದ್ದಾರೆ. ಈ ಬಾಲಕಿ ಮತ್ತು ಈಕೆಯ ಸಂಬಂಧಿ ಫೆ. 12ರಂದು ಅಜ್ಮೇರ್​-ಮೈಸೂರು ಎಕ್ಸ್​ಪ್ರೆಸ್​​ನಲ್ಲಿ ಸಂಚರಿಸುತ್ತಿದ್ದು, ಇವರು ಸೂರತ್​ನಿಂದ ಮೈಸೂರಿಗೆ ಹೊರಟಿದ್ದರು.

    ಮಾರ್ಗಮಧ್ಯೆ ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಇವರಿಬ್ಬರು ತಿಂಡಿ ಕೊಳ್ಳಲು ಇಳಿದಿದ್ದರು. ಮರಳುವಷ್ಟರಲ್ಲೇ ರೈಲು ಹೊರಡಲಾರಂಭಿಸಿದ್ದು, ತರಾತುರಿಯಲ್ಲಿ ಹತ್ತುವಾಗ ಬಾಲಕಿ ಎಡವಿ ಬಿದ್ದು ರೈಲು ಮತ್ತು ಪ್ಲ್ಯಾಟ್​ಫಾರ್ಮ್​ ನಡುವೆ ಸಿಲುಕಿದ್ದಳು.

    ಅದೇ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಲು ಬರುತ್ತಿದ್ದ ಲೋಕೋ ಪೈಲಟ್​ ಅದನ್ನು ನೋಡಿ ತಕ್ಷಣ ಸಹಾಯಕ್ಕೆ ಧಾವಿಸಿ ಬಾಲಕಿಯನ್ನು ಎಳೆದೆತ್ತಿ ರಕ್ಷಿಸಿದ್ದಾರೆ. ಈ ಪ್ರಯತ್ನದಲ್ಲಿ ಲೋಕೋಪೈಲಟ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

    ರೈಲ್ವೆ ಪ್ಲ್ಯಾಟ್​ಫಾರ್ಮ್​ನಲ್ಲಿ ಸಿಲುಕಿದ ಬಾಲಕಿ; ನೆರವಿಗೆ ಧುಮುಕಿ ಜೀವ ಉಳಿಸಿದ ಲೋಕೋಪೈಲಟ್​
    ಲೋಕೋ ಪೈಲಟ್​ ಅನಿರ್ಬನ್ ಗೋಸ್ವಾಮಿ

    ‘ಇನ್ನೂ ಗ್ಯಾರಂಟೀ..’ ಎನ್ನುತ್ತ ಆ ನೆನಪನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts