

ನೆಲಮಂಗಲ: ಶಾಂತಿನಗರ ಬಳಿಯ ಬಸವ ನಗರದಲ್ಲಿ ಜ.18ರ ರಾತ್ರಿ ನಡೆದಿದ್ದ ಅತ್ಯಾಚಾರ ಮತ್ತು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪ್ರಕರಣದಿಂದ ಕೈಬಿಡುವಂತೆ ತುಮಕೂರಿನ ಮಾಜಿ ಶಾಸಕ ಸುರೇಶ್ಗೌಡ ಪೊಲೀಸರಿಗೆ ಅವಾಜ್ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಆಡಿಯೋದಲ್ಲೇನಿದೆ?: 'ಇಲ್ಲಿ ಏನು ನಡೀತಿದೆ ಎಂಬುದು ಗೊತ್ತಿದೆ. ನಾನು ನಿಮ್ಮ ಕಚೇರಿಗೆ ಬಂದಿದ್ದೇನೆ ಎಂದರೆ ಅದಕ್ಕೊಂದು ಕಾರಣ ಇರುತ್ತದೆ. ನಿಮಗೆ ಅಧಿಕಾರ ಇದೆ. ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇಲ್ಲ ಎಂದು ಸವಾರಿ ಮಾಡಬೇಡಿ. ಕೇಸ್ ಮಾಡಬೇಡಿ ಎಂದು ಹೇಳಿದ್ದೇನೆ. ಆದರೂ ಕೇಸ್ ಮಾಡುತ್ತಿದ್ದೀರಿ. ನಿಮ್ಮ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ' ಎಂಬುದು ಮಾಜಿ ಶಾಸಕರ ಧ್ವನಿಯಲ್ಲಿದೆ. ಇದನ್ನೂ ಓದಿರಿ ಪ್ಲೀಸ್ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!
ಇವರ ಈ ಸಂಭಾಷಣೆಯನ್ನು ಡಿವೈಎಸ್ಪಿ ಕಚೇರಿ ಸಿಬ್ಬಂದಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದದ್ದನ್ನು ಗಮನಿಸಿದ ಅವರು, 'ಏನಪ್ಪಾ... ಬ್ಲ್ಯಾಕ್ಮೇಲ್ ಮಾಡಲು ರೆಕಾರ್ಡ್ ಮಾಡಿಕೊಳ್ಳುತ್ತಿದ್ದೀಯಾ? ನಾನು ಬಂದಿರುವುದು ನ್ಯಾಯ ಕೇಳೋಕ್ಕೆ ಹೊರತು, ಗಲಾಟೆ ಮಾಡಲು ಅಲ್ಲ' ಎಂದು ಹೇಳಿರುವುದೂ ದಾಖಲಾಗಿದೆ.
ನೆಲಮಂಗಲದ ಮಾಜಿ ಶಾಸಕ ಎಂ.ಬಿ.ನಾಗರಾಜು ಅವರು ಸುರೇಶ್ಗೌಡ ಅವರ ಜತೆ ಡಿವೈಎಸ್ಪಿ ಕಚೇರಿಗೆ ತೆರಳಿದ್ದರೂ, ಅವರು ಮಾತನಾಡದೆ ಸುಮ್ಮನಿದ್ದರು ಎನ್ನಲಾಗಿದೆ. ಇದನ್ನೂ ಓದಿರಿ ಕಾಲೇಜು ಯುವತಿಯ ಬೆತ್ತಲೆ ಫೋಟೋ ಸ್ನೇಹಿತರ ಕೈಯಲ್ಲಿ! ಮುಂದೆ ನಡೆದೇ ಹೋಯ್ತು ಅವಾಂತರ…
ಪ್ರಕರಣ ಏನು?: ಬಸವನಗರದಲ್ಲಿ ಜ.18ರ ರಾತ್ರಿ ಅಂಗಡಿಯಲ್ಲಿದ್ದ ಸುಶೀಲಾ ಎಂಬುವರ ಮೇಲೆ ಬಾವಿಕೆರೆ ಗ್ರಾಮದ ಅಂಜನಾಮೂರ್ತಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಆಗ, ಮಚ್ಚಿನಿಂದ ಹಲ್ಲೆ ಮಾಡಿ ಸುಶೀಲಾ ಪಾರಾಗಿದ್ದರು. ಬಳಿಕ ಮನೆಗೆ ಹೋದ ಅಂಜನಾಮೂರ್ತಿ ತನ್ನ ತಂದೆ ಮುನಿರಾಜು ಮತ್ತು ತಾಯಿ ಲಲಿತಮ್ಮ ಜತೆ ಬಂದು, ಸುಶೀಲಾ ಅವರನ್ನು ಹಿಡಿದು ಅವರ ಕಾಲುಗಳಿಗೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿತ್ತು.
ಲಲಿತಮ್ಮನನ್ನು ಕೈಬಿಡಲು ಆಗ್ರಹ: ಪ್ರಕರಣದಲ್ಲಿ ಆಂಜನಾಮೂರ್ತಿ, ಆತನ ತಂದೆ ಮುನಿರಾಜು ಮತ್ತು ತಾಯಿ ಲಲಿತಮ್ಮ ವಿರುದ್ಧ ಕೊಲೆಯತ್ನ ಹಾಗೂ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಮೂವರನ್ನೂ ಪೊಲೀಸರು ಬಂಧಿಸಿದ್ದರು. ಈಗ ಪ್ರಕರಣದ 3ನೇ ಆರೋಪಿ ಆಗಿರುವ ಲಲಿತಮ್ಮ ಅವರನ್ನು ಪ್ರಕರಣದಿಂದ ಕೈಬಿಡುವಂತೆ ಸುರೇಶ್ಗೌಡ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.