

ಮೈಸೂರು: ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ಗೆ ದುಷ್ಕರ್ಮಿಗಳು ಕ್ರಿಮಿನಾಶಕ ಬೆರೆಸಿದ ಘಟನೆ ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ಸಂಭವಿಸಿದೆ.
ನೀರು ವಾಸನೆ ಬಂದಿದ್ದರಿಂದ ಗ್ರಾಮಸ್ಥರು ಅನುಮಾನಗೊಂಡು ನೀರನ್ನು ಬಳಕೆ ಮಾಡದ ಪರಿಣಾಮ ಎಚ್ಚೆತ್ತ ಬಾರಿ ಅನಾಹುತ ತಪ್ಪಿದೆ. ಈ ನೀರು ಕುಡಿದ ಸಾಕುಪ್ರಾಣಿಗಳು ಅಸ್ವಸ್ಥಗೊಂಡಿವೆ. ಕುಡಿವ ನೀರಿಗೆ ಕ್ರಿಮಿನಾಶಕ ಹಾಕಿದ ಘಟನೆಯಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.