

ಜೈಪುರ: ಮೊಬೈಲ್ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್‌ಗಳ ಬಳಕೆ ಯುವಜನಾಂಗವನ್ನು ಬಹುವಾಗಿ ಆಕರ್ಷಿಸುವ ಪೋಕೊ ಎಕ್ಸ್ 7 ಮತ್ತು ಎಕ್ಸ್ 7 ಪ್ರೋ ಸಿರೀಸ್ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿದೆ.
ಹಲವು ವಿಶೇಷತೆಗಳಿಂದ ಕೂಡಿರುವ ಪೋಕೊ ಎಕ್ಸ್ 7 ಸಿರೀಸ್ ಮೊಬೈಲ್‌ಗಳನ್ನು ಬಾಲಿವುಡ್ ನಟ ಅಕ್ಷಯ್‌ಕುಮಾರ್ ಇತ್ತೀಚೆಗೆ ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಪೋಕೋದ ಎಕ್ಸ್ 7 5ಜಿ ಮತ್ತು ಎಕ್ಸ್ 7 ಪ್ರೊ 5ಜಿಯ ಮೊಬೈಲ್‌ಗಳು ಭಾರತದ ಪ್ರಥಮ ಅತಿಹೆಚ್ಚು ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದ್ದು, ಅತ್ಯದ್ಭುತ ಡಿಸ್‌ಪ್ಲೇ ಕ್ವಾಲಿಟಿಯಿಂದ ಕೂಡಿದೆ. 6550 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್‌ನಿಂದ ಧೀರ್ಘ ಕಾಲದವರೆಗೆ ಮೊಬೈಲ್ ಬಳಕೆಯು ನಿರಾತಂಕವಾಗಿ ಮುಂದುವರೆಸಬಹುದು. ಆದರೆ 45 ವ್ಯಾಟ್ಸ್ ಮತ್ತು 90 ವ್ಯಾಟ್ಸ್ ಹೈಪರ್ ಚಾರ್ಜರ್ ಮೂಲಕ ವೇಗವಾಗಿ ಚಾರ್ಜ್ ಮಾಡಬಹುದಾಗಿದೆ.
ಸಮಾರಂಭದಲ್ಲಿ ಮಾತನಾಡಿದ ಪೋಕೊ ಇಂಡಿಯಾದ ಮುಖ್ಯಸ್ಥ ಹಿಮಾಂಶು ಟಂಡನ್, ಪೋಕೊ ಎಕ್ಸ್ 7, ಎಕ್ಸ್ 7 ಪ್ರೋ ಸಿರೀಸ್ ಹೈಕ್ವಾಲಿಟಿ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಹಾಗೂ ಆಕರ್ಷಕ ತಿರುವು ಶೈಲಿಯ ಸ್ಕ್ರೀನ್ ಹೊಂದಿದ್ದು, ಬಳಕೆದಾರರಿಗೆ ಹೊಸತೊಂದು ಅನುಭವ ನೀಡುತ್ತದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಪೋಕೊ ಇಂಡಿಯಾದ ಪ್ರತಿನಿಧಿಯಾಗಿರುವುದು ಸಂಸ್ಥೆಗೆ ಹಾಗೂ ಅವರ ಅಭಿಮಾನಿಗಳಿಗೆ ಸಂತಸ ತಂದಿದೆ ಎಂದರು.
ಮೊಬೈಲ್ ತೆಗೆದುಕೊಳ್ಳುವ ಗ್ರಾಹಕರ ಮೊದಲ ಆಯ್ಕೆ ಕ್ಯಾಮೆರಾ ಆಗಿರುತ್ತದೆ. ಗ್ರಾಹಕರ ಈ ಬೇಡಿಕೆಗನುಗುಣವಾಗಿ ಪೋಕೊ ಎಕ್ಸ್ 7 5ಜಿ ಮೊಬೈಲ್‌ನಲ್ಲಿ 50 ಎಂಪಿ ಕ್ಯಾಮೆರಾ ಇದ್ದು, ನೈಟ್ ಮೋಡ್‌ನಲ್ಲಿ ಕೂಡಾ ಅತ್ಯದ್ಭುತ ೆಟೋವನ್ನು ತೆಗೆಯಬಹುದು.
ಅತ್ಯಂತ ಅಡ್ವಾನ್ಸ್ ಆಪರೇಟಿಂಗ್ ಸಿಸ್ಟಮ್‌ನಿಂದ ಕೂಡಿರುವ ಪೋಕೊ ಎಕ್ಸ್ 7 ಸಿರೀಸ್ ಅತ್ಯಾಧುನಿಕ ವೇಗಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತದೆ.