ಭಾರತೀಯ ಕಲಾಪ್ರಕಾರಗಳು ಸಂಸ್ಕೃತಿಯ ಪ್ರತೀಕ : ಸುಬ್ರಹ್ಮಣ್ಯ ಅಡಿಗ

gokulam
ಪೆರಿಯ ಗೋಕುಲಂ ಗೋಶಾಲೆಯಲ್ಲಿ ವೈಶಾಖ ನಟನಂಗೆ ಸುಬ್ರಹ್ಮಣ್ಯ ಅಡಿಗ ಚಾಲನೆ ನೀಡಿದರು. ವಿಷ್ಣುಪ್ರಸಾದ ಹೆಬ್ಬಾರ್, ಕೆ.ಕುಞಿರಾಮನ್, ಟಿ.ಪಿ.ಶ್ರೀನಿವಾಸನ್, ಪಯ್ಯನ್ನೂರು ಗೋವಿಂದ ಪ್ರಸಾದ್ ಮೊದಲಾದವರಿದ್ದರು.
Published on

ಮುಳ್ಳೇರಿಯ: ಭಾರತೀಯ ಕಲಾಪ್ರಕಾರಗಳು ಸಂಸ್ಕೃತಿಯ ಪ್ರತೀಕವಾಗಿದೆ. ಸಂಗೀತ, ನೃತ್ಯ ಮೊದಲಾದ ವಿಶಿಷ್ಟ ಕಲೆಗಳಿಗೆ ಪ್ರೋತ್ಸಾಹ ನೀಡಲು ಗೋಕುಲಂ ಗೋಶಾಲೆಯ ನಿರಂತರ ಪ್ರಯತ್ನ ಶ್ಲಾಘನೀಯ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಅಡಿಗ ಅಭಿಪ್ರಾಯಪಟ್ಟರು.

ಬೇಕಲ ಸಮೀಪದ ಪೆರಿಯ ಗೋಕುಲಂ ಗೋಶಾಲೆ ಪರಂಪರಾ ವಿದ್ಯಾಪೀಠದಲ್ಲಿ ಬುಧವಾರ ಸಂಜೆ 9 ದಿನಗಳ ನೃತ್ಯೋತ್ಸವ ವೈಶಾಖ ನಟನಂ 24ಗೆ ಚಾಲನೆ ನೀಡಿ ಮಾತನಾಡಿದರು.

ಗೋಶಾಲೆಯ ವಿಷ್ಣುಪ್ರಸಾದ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಹಾಗೂ ಪೂರಕಳಿ ಅಕಾಡೆಮಿ ಅಧ್ಯಕ್ಷ ಕೆ.ಕುಞಿರಾಮನ್, ಸಂಗೀತಗಾರ ಟಿ.ಪಿ.ಶ್ರೀನಿವಾಸನ್, ಮೋರ್ಸಿಂಗ್ ವಾದಕ ಪಯ್ಯನ್ನೂರು ಗೋವಿಂದ ಪ್ರಸಾದ್, ಪಲ್ಲವ ನಾರಾಯಣನ್ ಶುಭ ಹಾರೈಸಿದರು.

ವಿನೋದ್ ಕೃಷ್ಣನ್ ಸ್ವಾಗತಿಸಿದರು. ಡಾ.ನಾಗರತ್ನಾ ವಂದಿಸಿದರು. ನಂತರ ಗಾಯತ್ರಿ ರಾಜಾಜಿ ಚೆನ್ನೈ, ತೀರ್ಥ ಇ.ಪೊದುವಾಳ್, ವರ್ಷ ರಾಜ್‌ಕುಮಾರ್ ಮತ್ತು ವೈಗಾ ಮನೋಜ್ ನೃತ್ಯ ಪ್ರದರ್ಶಿಸಿದರು.

ಸಂಜೆ 4ರಿಂದ 9ರ ತನಕ ಅರ್ಪಿತಾ ಹೆಗ್ಡೆ ಸಿರ್ಸಿ, ಕರ್ನಾಟಕ(ಭರತನಾಟ್ಯಂ), ನಯನಾ ನಾರಾಯಣನ್(ಮೋಹಿನಿಯಾಟ್ಟಂ), ಅಶ್ವತಿ ಕೃಷ್ಣ (ಮೋಹಿನಿಯಾಟ್ಟಂ), ಅದಿತಿ ಅಖಿಲ್ ಪಯ್ಯನ್ನೂರ್(ಭರತನಾಟ್ಯಂ), ಕಲಾಮಂಡಲಂ ಕೃಷ್ಣಪ್ರಿಯಾ(ಮೋಹಿನಿಯಾಟ್ಟಂ) ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net