

ಕಾಸರಗೋಡು: ಬೇಸಿಗೆ ರಜೆ ಕಳೆಯಲು ಬರುವ ಪ್ರವಾಸಿಗರಿಗಾಗಿ ಬೇಕಲ ಬೀಚ್ಪಾರ್ಕ್ನಲ್ಲಿ ಸಜ್ಜುಗೊಳಿಸಲಾದ ಟೇಸ್ಟಿ ಕಾರ್ನಿವಲ್ನ್ನು ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಹಾಗೂ ಬಿಆರ್ಡಿಸಿ ಮಂಡಳಿ ಅಧ್ಯಕ್ಷ ಕೆ.ಮಣಿಕಂಠನ್ ಉದ್ಘಾಟಿಸಿದರು.
ಉದ್ಯಾನವನದಲ್ಲಿ ಮಲಬಾರ್ನ ವಿಶಿಷ್ಟ ರುಚಿಗಳ ವಿವಿಧ ಮಳಿಗೆ ಸಿದ್ಧಪಡಿಸಲಾಗಿದ್ದು, ಜೂನ್ 2ರ ವರೆಗೆ ಸಂಜೆ 4 ರಿಂದ ರಾತ್ರಿ 11 ರವರೆಗೆ ಸ್ಥಳೀಯ, ಭಾರತೀಯ, ಚೈನೀಸ್ ಮತ್ತು ಇತರ ಭಕ್ಷ್ಯಗಳ ರುಚಿಕರವಾದ ಕಾರ್ನಿವಲ್ ನಡೆಯಲಿದೆ. ಕ್ಯೂಎಚ್ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಲತೀಫ್ ಕೆ.ಕೆ., ಅನಸ್ ಮುಸ್ತಫಾ, ಶಿವದಾಸ್ ಕಿನೇರಿ, ಆಶೀರ್ ಅಬ್ದುಲ್ಲಾ, ಶೀಬಾ, ಮಿಥಿಲಾಜ್, ನಿತಿನ್ ವೆಳ್ಳಿಕೋತ್ ಮತ್ತು ಅರುಣ್ ವೆಳ್ಳಿಕೋತ್ ಉಪಸ್ಥಿತರಿದ್ದರು.