

ಹೆಬ್ರಿ: ಹೆಬ್ರಿ ತಾಲೂಕು ಕಚೇರಿಯಲ್ಲಿ ಮಂಗಳವಾರ ಪಿಂಚಣಿ ಹಾಗೂ ಪೌತಿ ಅದಾಲತ್ ತಹಸೀಲ್ದಾರ್ ಎಸ್.ಎ.ಪ್ರಸಾದ್ ನೇತೃತ್ವದಲ್ಲಿ ಮಂಗಳವಾರ ನಡೆಯಿತು.
ತಹಸೀಲ್ದಾರ್ ಮಾತನಾಡಿ, ತಾಲೂಕಿನಲ್ಲಿ ಅತಿ ಹೆಚ್ಚು ಪೌತಿ ಖಾತೆ ಮಾಡಿಸಿಕೊಳ್ಳಲು ಬಾಕಿ ಇದೆ. ಇನ್ನು ಕೆಲವು ದಿನಗಳ ಕಾಲ ಕಚೇರಿಯಲ್ಲಿ ಪೌತಿ ಖಾತೆಗೆ ಸಂಬಂಧಿಸಿದ ಕೆಲಸ ನಡೆಯಲಿದ್ದು, ಸೂಕ್ತ ದಾಖಲೆಗಳೊಂದಿಗೆ ಕಚೇರಿಯಲ್ಲಿ ಮಾಡಿಸಲು ಸೂಚಿಸಿದರು. ಉಪ ತಹಸೀಲ್ದಾರ್ ರಾಘವೇಂದ್ರ ನಾಯ್ಕ, ಕಂದಾಯ ನಿರೀಕ್ಷಕ ಹಿತೇಶ್, ಗ್ರಾಮ ಆಡಳಿತಾಧಿಕಾರಿಗಳು ಇದ್ದರು.