ಕೊಕ್ಕರ್ಣೆ: ಕುಡುಬಿ ಸಮಾಜೋದ್ಧಾರಕ ಸಂಘ ಅಲ್ತಾರು ಯಡ್ತಾಡಿ, ಜಿಲ್ಲಾ ಕುಡುಬಿ ಯುವ ಸಂಘಟನೆ ಮತ್ತು ಜಿಲ್ಲಾ ಕುಡುಬಿ ಉಪಸಮಿತಿಗಳ ಆಶ್ರಯದಲ್ಲಿ ಜಿಲ್ಲಾ ಕುಡುಬಿ ಯುವ ಸಂಘಟನೆಯ ದಶಮಾನೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಅಥ್ಲೇಟಿಕ್ಸ್- 2025ರಲ್ಲಿ ಸಾಧನೆಗೈದ ಸಂದೀಪ್ ನಾಯ್ಕ ಚೆಗ್ರಿಬೆಟ್ಟು, ಗೋಪಾಲ ನಾಯ್ಕ ತೆಂಕಬೆಟ್ಟು, ಅರ್ಪಿತಾ ಕಿರಾಡಿ ಹಾಗೂ ಕೃಷ್ಣಪ್ರಸಾದ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ, ಜಿಲ್ಲಾ ಕುಡುಬಿ ಯುವ ಸಂಘಟನೆ ಅಧ್ಯಕ್ಷ ವಿಘ್ನೇಶ್ ರಂಜಾಲು, ಪ್ರಮುಖರಾದ ಪ್ರತಾಪ್ ಹೆಗ್ಡೆ ಮಾರಾಳಿ, ಪ್ರಭಾಕರ ನಾಯ್ಕ ಕಲ್ಮರ್ಗಿ, ಎಂ.ಕೆ.ನಾಯ್ಕ ಮಿಯಾರು, ವೈ.ಸುರೇಂದ್ರ ನಾಯ್ಕ ಯಳಂತೂರು, ಎಚ್.ಬೆಳ್ಳ ನಾಯ್ಕ ಕೊಕ್ಕರ್ಣೆ, ಪಾರ್ವತಿ ಗೋಳಿಯಂಗಡಿ, ನಾರಾಯಣ ನಾಯ್ಕ ಗೋಳಿಯಂಗಡಿ, ಮಹಾಬಲ ನಾಯ್ಕ ಅಲ್ಬಾಡಿ, ಕಾಳು ನಾಯ್ಕ ಎಲ್ಸಿಮನೆ, ನಾರಾಯಣ ಮಣೂರು, ರಾಮಕೃಷ್ಣ ಮಂದಾರ್ತಿ, ರಾಧಾ ಹಳನೀರು ಮತ್ತಿತರರು ಉಪಸ್ಥಿತರಿದ್ದರು.