

ಹೆಬ್ರಿ: ತಮ್ಮ ಪತಿ, ಖಾಸಗಿ ಬಸ್ ಮಾಲೀಕ ಕನ್ಯಾನ ಬನಶಂಕರಿಯ ಶಿವಪ್ರಸಾದ್ ಪರಸ್ತ್ರಿ ಜತೆ ಸಂಬಂಧ ಹೊಂದಿದ್ದು, ಜತಗೆ ತನಗೆ ದೈಹಿಕ ಹಿಂಸೆ ನೀಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವರದಕ್ಷಿಣೆ ಕಿರುಕುಳದಡಿ ಪ್ರಕರಣ ದಾಖಲಾಗಿದೆ. ಮಂಜುಳಾ ಎಂಬುವರು ದೂರು ನೀಡಿದ್ದು, ಆರೋಪಿ ಶಿವಪ್ರಸಾದ್ ಹಲವು ವರ್ಷಗಳಿಂದ ಹೆಬ್ರಿಯಲ್ಲಿ ಖಾಸಗಿ ಬಸ್ ಚಾಲಕ ಮತ್ತು ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ವತಃ ಒಂದು ಬಸ್ ಮಾಲೀಕನಾಗಿದ್ದಾನೆ. ತನ್ನ ವಿವಾಹದ ಸಂದರ್ಭ ಮನೆಯವರು ನೀಡಿದ ಚಿನ್ನಾಭರಣಗಳನ್ನು ಅಡವಿರಿಸಿದ್ದು, ಬಸ್ ಲೀಸ್ ಪಡೆಯಲು ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದಾರೆ. ಜತೆಗೆ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ತನ್ನ ಹಾಗೂ ಮಕ್ಕಳ ಪಾಲನೆಗೆ ಹಣ ನೀಡದಿರುವುದರ ಜತೆಗೆ ಹಿಂಸೆಯನ್ನೂ ನೀಡುತ್ತಿದ್ದಾರೆ. ಜತೆಗೆ ಜೀವ ಬೆದರಿಕೆಯನ್ನೂ ಒಡ್ಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.