

ಸುಳ್ಯ: ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ 2025-26ನೇ ಸಾಲಿನ ಶಾಲಾ ಸಂಸತ್ ಪದಗ್ರಹಣ ಸಮಾರಂಭ ಕೆವಿಜಿ ಸಮುದಾಯಭವನದಲ್ಲಿ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಸುಳ್ಯದ ಎಎಸ್ಸೆ ತಾರಾನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿ ನಾಯಕರ ಪಥಸಂಚಲನ ನಡೆಯಿತು. ಶಾಲಾ ನಾಯಕ ಶ್ರೀಹರಿ ಎಸ್, ಉಪನಾಯಕ ಮೋಹಕ್ ಕೆ, ನಾಯಕಿ ಸ್ಕಂದಾ ದಿಯ ಕಲ್ಲಾಜೆ, ಉಪನಾಯಕಿ ಪ್ರತಿಕ್ಷಾ, ವಿದ್ಯಾರ್ಥಿ ಪ್ರಮುಖರಾದ ಸೋನಾ ನಾರ್ಕೂಡು, ನಿಧಿ ಪಿ.ಎಚ್, ಮನ್ವಿತಾ ಸಿ.ಎಚ್, ನಿಯಾ ಶೆಟ್ಟಿ, ಅಲಿಸ್ಬ ಸಾರ, ಮಾನ್ವಿ ಎ.ವೈ, ಆಯಿಷತ್ ಉಮ್ಮಲ್ ಫಿದಾ, ಕ್ಷಿತಿ ಎನ್.ಮುರೂರ್, ಆಯಿಷಾ ನಶ್ವ, ವೀಕ್ಷಿತ್ ಎಎಸ್ ಅಧಿಕಾರ ಸ್ವೀಕರಿಸಿದರು.
ಪ್ರಾಂಶುಪಾಲ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೆವಿಜಿ ಅಮರಜ್ಯೋತಿ ಕಾಲೇಜು ಪ್ರಾಂಶುಪಾಲೆ ಡಾ.ಯಶೋದಾ ರಾಮಚಂದ್ರ, ಐಟಿಐ ಕಾಲೇಜು ಪ್ರಾಂಶುಪಾಲ ದಿನೇಶ್ ಮಡ್ತಿಲ, ಡೆಂಟಲ್ ಕಾಲೇಜು ಆಡಳಿತಾಧಿಕಾರಿ ಮಾಧವ ಬಿ.ಟಿ, ಕೆವಿಜಿ ಆಡಳಿತ ಮಂಡಳಿಯ ಪ್ರಸನ್ನ ಕಲ್ಲಾಜೆ, ಪದ್ಮನಾಭ, ದಯಾನಂದ ಅಟ್ಲೂರು, ಎಒಎಲ್‌ಇ ಕಮಿಟಿ ಬಿ ಆಡಳಿತಾಧಿಕಾರಿ ಭವಾನಿ ಶಂಕರ ಅಡ್ತಲೆ, ಬಾಲಗೋಪಾಲ ಸೇರ್ಕಜೆ, ಸಂತೋಷ್ ಕುತ್ತಮುಟ್ಟೆ, ಶಿಲ್ಪಾ ಬಿದ್ದಪ್ಪ ಉಪಸ್ಥಿತರಿದ್ದರು. ಶಮ್ಯಾ ಸ್ವಾಗತಿಸಿದರು. ಮೋಹಕ್ ವಂದಿಸಿದರು. ಶ್ರದ್ಧಾ ಪೈ ಮತ್ತು ಸೀಮಾ ಆಯಿಷಾ ನಿರೂಪಿಸಿದರು. ಸ್ಪಂದನಾ ಸಹಕರಿಸಿದರು.