ಬಾಳಿಯೂರಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ

New Project (28)
Published on

ಮಂಜೇಶ್ವರ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಪ್ರಾಯೋಜಕತ್ವದಲ್ಲಿ ಬಾಳಿಯೂರಿನ ಶ್ರೀ ಅಯ್ಯಕಪಾ ಯಕ್ಷಗಾನ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಎರಡು ತಿಂಗಳ ಉಚಿತ ಯಕ್ಷಗಾನ ತರಬೇತಿಯನ್ನು ಇತ್ತೀಚೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು ಉದ್ಘಾಟಿಸಿದರು.

ಬಾಳಿಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಮುತ್ತು ಶೆಟ್ಟಿ ಬಾಳಿಯೂರು ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು ಹಾಗೂ ಯಕ್ಷಗಾನ ಗುರು ಶೇಖರ ಶೆಟ್ಟಿ ಬಾಯಾರು ಅವರನ್ನು ಗೌರವಿಸಲಾಯಿತು.

ಯಕ್ಷಗಾನ ಗುರು ಶೇಖರ ಶೆಟ್ಟಿ ಬಾಯಾರು, ಮಂದಿರದ ಗುರುಸ್ವಾಮಿ ರಾಧಾಕೃಷ್ಣ ರೈ, ಶಿಕ್ಷಕಿ ತಾರಾಮಣಿ ವಿ.ರೈ, ಶಿಕ್ಷಕ ಅಶೋಕ್ ಕುಮಾರ್ ಡಿ., ಮೃತ್ಯುಂಜಯ ಯುವಕ ವೃಂದ ಕಲ್ಲಗದ್ದೆ ಸಂಘಟನೆ ಪ್ರಧಾನ ಸಂಚಾಲಕಿ ಅಶ್ವಿನಿ ಕಲ್ಲಗದ್ದೆ, ಮಂದಿರದ ಸಂಚಾಲಕ ಯೋಗೀಶ ರಾವ್ ಚಿಗುರುಪಾದೆ, ಮುಖ್ಯಶಿಕ್ಷಕ ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ಉಪಸ್ಥಿತರಿದ್ದರು. ರಾಮಕೃಷ್ಣ ಸಂತಡ್ಕ ಸ್ವಾಗತಿಸಿದರು. ಬ್ರಿಜೇಶ್ ಬಾಳಿಯೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net