ಉಕ್ಕಿ ಹರಿದ ಪಾಪನಾಶಿನಿ ನದಿ

mulugade
ಶಿರ್ವ ಬಡಗು ಪಂಜಿಮಾರು ಬಳಿಯಲ್ಲಿ ಮುಳುಗಡೆಯಾದ ಮನೆ
Published on

ಶಿರ್ವ: ಸುರಿದ ಭಾರಿ ಮಳೆಗೆ ಶಿರ್ವ-ಪಂಜಿಮಾರು-ಪಡುಬೆಳ್ಳೆಯಾಗಿ ಉದ್ಯಾವರ ಸೇರುವ ಪಾಪನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು, ತಗ್ಗುಪ್ರದೇಶದ ಮನೆಗಳು, ಪಂಪ್‌ಶೆಡ್‌ಗಳು ಭಾಗಶಃ ಮುಳುಗಡೆಯಾಗಿವೆ. ಶಿರ್ವ ಗ್ರಾಪಂ ವ್ಯಾಪ್ತಿಯ ಮುದ್ರೊಟ್ಟು, ನಡಿಬೆಟ್ಟು, ಅಟ್ಟಿಂಜ, ಬಡಗು ಪಂಜಿಮಾರು ಹಾಗೂ ಬೆಳ್ಳೆ ಗ್ರಾಪಂ ವ್ಯಾಪ್ತಿಯ ಪಡುಬೆಳ್ಳೆ ನದಿ ತೀರ ಪ್ರದೇಶಗಳಲ್ಲಿ ನೆರೆ ನೀರು ಆವರಿಸಿದೆ. ಗುರುವಾರವೂ ಬಿರುಸಾದ ಮಳೆಯಾಗಿದ್ದು, ನೆರೆ ಏರುವ ಸಂಭವವಿದೆ. ತೋಟ, ಬೇಸಾಯದ ಗದ್ದೆಗಳಲ್ಲಿ ನೆರೆ ತುಂಬಿ ಅಪಾರ ಬೆಳೆ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net