ಕಾರ್ಕಳ: ಭಾರಿ ಮಳೆಗೆ ಶಾಂಭವಿ ನದಿ ಉಕ್ಕಿ ಹರಿಯುತ್ತಿದ್ದು ಇನ್ನಾ ಗ್ರಾಮದಲ್ಲಿ ನೆರೆ ನೀರು ನುಗ್ಗಿ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದೆ. ನೆರೆ ನೀರಿನಿಂದ ಆವೃತಗೊಂಡ ಮನೆಮಂದಿಯನ್ನು ಸ್ಥಳಾಂತರಿಸಲಾಗಿದ್ದು, ಕುಳ್ತೆ ಮಠ ಸಮೀಪದ ಮೂರು ಕುಟುಂಬಗಳನ್ನು ಇನ್ನಾ ಶ್ರೀ ಮಹಾಲಿಂಗೇಶ್ವರ ದೇವಳದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
ನೆರೆಯಿಂದ ಸಮಸ್ಯೆಯಾದ ಇನ್ನಾ ಗ್ರಾಮಕ್ಕೆ ಕಾರ್ಕಳ ತಹಸೀಲ್ದಾರ್ ನರಸಪ್ಪ, ಕಾರ್ಯನಿವರ್ಹಣಾಧಿಕಾರಿ ಗುರುದತ್ ಎಂ.ಎನ್., ಕಂದಾಯ ನಿರೀಕ್ಷಕ ಶಿವಪ್ರಸಾದ್ ರಾವ್, ಗ್ರಾಮಕರಣಿಕ ಹಣಮಂತ, ಪಿಡಿಒ ಆಶಾಲತಾ, ಅಧ್ಯಕ್ಷೆ ಸರಿತಾ ಶೆಟ್ಟಿ, ಉಪಾಧ್ಯಕ್ಷೆ ವಿಮಲಾ, ಮಾಜಿ ಅಧ್ಯಕ್ಷ ಕುಶಾ ಆರ್.ಮೂಲ್ಯ, ಪಡುಬಿದ್ರಿ ಪೊಲೀಸರು, ಪಂಚಾಯಿತಿ ಸದಸ್ಯ ಚಂದ್ರಹಾಸ ಶೆಟ್ಟಿ, ಕಾರ್ಯದರ್ಶಿ ರಮೇಶ್ ಪೂಜಾರಿ, ಸಹಾಯಕ ರಮೇಶ್ ಸಪಳಿಗ, ಶಿವರಾಜ್ ಭಟ್, ಶೇಖರ ಪೂಜಾರಿ, ಉದಯ ಪೂಜಾರಿ, ಗೋವಿಂದ, ಸುಕೇತ್ ಶೆಟ್ಟಿ ಮತ್ತಿತರರು ಸಹಕರಿಸಿದರು.