ಪಂಜ ಜಾತ್ರೆ ಪೂರ್ವಭಾವಿ ಸಭೆ

New Project (13)
Published on

ಸುಬ್ರಹ್ಮಣ್ಯ: ಜಾತ್ರಾ ಮಹೋತ್ಸವವನ್ನು ಸುಸೂತ್ರವಾಗಿ ನಡೆಸಲು ಸರ್ವ ಭಕ್ತರ ಸಹಕಾರ ಅತ್ಯಗತ್ಯ ಎಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಹೇಳಿದರು.

ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಾತ್ರಾ ಮಹೋತ್ಸವದ ಸಂದರ್ಭ ಅನ್ನದಾನ ಸೇವೆ ನೆರವೇರಿಸಲು ಭಕ್ತರಿಗೆ ಅವಕಾಶ ಕಲ್ಪಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಹಸಿರು ಕಾಣಿಕೆ ಸಮರ್ಪಣೆ, ಆಮಂತ್ರಣ ಪತ್ರಿಕೆ ವಿತರಣೆ, ಬೈಲುವಾರಿ ಸಮಿತಿ ರಚನೆ, ರಥೋತ್ಸವದ ಬಗ್ಗೆ, ಭೋಜನ ವ್ಯವಸ್ಥೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಎಲ್ಲ ಸಂಘ-ಸಂಸ್ಥೆಗಳ ಸಹಕಾರ ಕೋರುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಎಲ್ಲ ದೇವಸ್ಥಾನಗಳನ್ನು ಸಂಪರ್ಕಿಸಿ ಸಹಕಾರ ಕೋರಲು ನಿರ್ಧರಿಸಲಾಯಿತು. ತಾತ್ಕಾಲಿಕ ಸಂತೆ, ಅಂಗಡಿ ಮಳಿಗೆ ತೆರೆಯುವ ಬಗ್ಗೆ, ನೀರು ಸರಬರಾಜು ವ್ಯವಸ್ಥೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವಿವಿಧ ಸಮಿತಿ, ಬೈಲುವಾರು ಸಮಿತಿಗಳನ್ನು ನೇಮಿಸಲಾಯಿತು.

ಗೌರವ ಸಲಹೆಗಾರ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ ಕಂಬಳ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತ್ಯನಾರಾಯಣ ಭಟ್ ಕಾಯಂಬಾಡಿ, ಧರ್ಮಪಾಲ ಗೌಡ ಮರಕಡ, ಸಂತೋಷ್ ರೈ ಬಳ್ಪ, ಮಾಯಿಲಪ್ಪ ಗೌಡ ಪಟ್ಟೆ, ಧರ್ಮಣ್ಣ ನಾಯ್ಕ ಗರಡಿ, ರಾಮಚಂದ್ರ ಭಟ್, ಮಾಲಿನಿ ಕುದ್ವ, ಪವಿತ್ರಾ ಮಲ್ಲೆಟ್ಟಿ ಇದ್ದರು.

ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಗೌಡ ಅಗೋಳಿಬೈಲುಗುತ್ತು, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರು, ಸೀಮೆಯ ಭಕ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net