ಗ್ರಾಮೀಣ ಮಟ್ಟದಲ್ಲೂ ಉತ್ತಮ ಕಾರ್ಯ: ಡಾ.ಎಂ.ಪಿ.ಶ್ರೀನಾಥ್ ಮೆಚ್ಚುಗೆ

Kin_Kannada
Published on

ಕಿನ್ನಿಗೋಳಿ: ಕನ್ನಡ ಮತ್ತು ಸಾಹಿತ್ಯದ ಕೆಲಸವನ್ನು ಗ್ರಾಮೀಣ ಮಟ್ಟದಲ್ಲೂ ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಹಿರಿಯ ಸಾಹಿತಿಗಳನ್ನು ಅವರ ಮನೆಗಳಲ್ಲಿ ಭೇಟಿ ವಾಡಿ ವಾತನಾಡಿಸುವ, ಗೌರವಿಸುವ ನಿಟ್ಟಿನಲ್ಲೂ ಕೆಲಸ ವಾಡುತ್ತಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ದ.ಕ. ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಹೇಳಿದರು.

ಕಿನ್ನಿಗೋಳಿಯಲ್ಲಿ ಮೂಲ್ಕಿ ಹೋಬಳಿ ಟಕವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

ಕಟೀಲು ದೇಗುಲದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಿನ್ನಿಗೋಳಿ ಚರ್ಚ್‌ನ ಜೊಕಿಂ ಫರ್ನಾಂಡಿಸ್, ಕಸಾಪ ವಾಜಿ ಗೌರವ ಕಾರ್ಯದರ್ಶಿ ಭುವನಾಭಿರಾಮ ಉಡುಪ, ಮಂಗಳೂರು ತಾಲೂಕು ಕಸಾಪ ವಾಜಿ ಅಧ್ಯಕ್ಷ ಮೋಹನದಾಸ ಸುರತ್ಕಲ್, ಮೂಲ್ಕಿ ತಾಲೂಕು ಟಕಾಧ್ಯಕ್ಷ ಮಿಥುನ ಕೊಡೆತ್ತೂರು, ರೋಟರಿಯ ಧನಂಜಯ ಶೆಟ್ಟಿಗಾರ್, ಸಾಹಿತಿ ಉದಯ ಕುವಾರ ಹಬ್ಬು, ಹೇವಾಚಾರ್ಯ ಮತ್ತಿತರರಿದ್ದರು.

ಹೋಬಳಿ ಟಕದ ನೂತನ ಅಧ್ಯಕ್ಷ ಜೊಸ್ಸಿ ಪಿಂಟೋ, ಗೌರವ ಕಾರ್ಯದರ್ಶಿ ಶರತ್ ಶೆಟ್ಟಿ, ಸಂಟನಾ ಕಾರ್ಯದರ್ಶಿ ಸ್ಟಾೃನಿ ಪಿಂಟೋ, ಸದಸ್ಯರಾದ ಪ್ರಮೋದ್ ಕುವಾರ್, ಅಂಬಿಕಾ ಶೆಟ್ಟಿ, ಸಂತೋಷ್ ಶೆಟ್ಟಿ, ಅಬ್ದುಲ್ ಖಾದರ್, ಡಾ.ಪುರುಷೋತ್ತಮ ಕೆ.ವಿ. ಅವರನ್ನು ಅಭಿನಂದಿಸಲಾಯಿತು.

ಶಶಿಕಲಾ ಕೆಮ್ಮಡೆ ಹಾಗೂ ಪ್ರಕಾಶ್ ಆಚಾರ್ ಕನ್ನಡದ ಹಾಡುಗಳನ್ನು ಹಾಡಿದರು. ಜೊಸ್ಸಿ ಪಿಂಟೋ ಸ್ವಾಗತಿಸಿದರು. ಶರತ್ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net