

ಮಂಗಳೂರು: ಶಾಂತಿನಗರ ಪಡೀಲ್ ಇಲ್ಲಿನ ಐಕ್ಯಮ್ ವಿಭಿನ್ನ ಮಕ್ಕಳ ಅಭಿವೃದ್ದಿ ಕೇಂದ್ರದ ವತಿಯಿಂದ ವಿಶೇಷ ಮಕ್ಕಳ ದಿನಾಚರಣೆ ನಗರದ ಕೊಟ್ಟಾರಿ ಸಭಾಭವನದಲ್ಲಿ ಜರುಗಿತು.
ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಶೋಭಾ ಬಿ.ಜಿ. ಕಾರ್ಯಕ್ರಮ ಉದ್ಘಾಟಿಸಿದರು. ಲೋಕಅದಾಲತ್ ಕೋರ್ಟ್ ಆಫೀಸರ್ ಮಂಜುನಾಥ ಜಿ.ರಾವ್, ಸಕ್ಷಮ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ, ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಅಧ್ಯಕ್ಷೆ ಶ್ಯಾಮಲ ಕುಂದರ್, ಮೂಲತ್ವ ಫೌಂಡೇಶನ್ ಸ್ಥಾಪಕ ಪ್ರಕಾಶ್ ಕೋಟ್ಯಾನ್, ಪ್ರಥ್ವಿ ಚಾರಿ ಟೇಬಲ್ ಅಧ್ಯಕ್ಷೆ ಲೋಲಾಕ್ಷಿ, ಐಕ್ಯಂ ಬಿನ್ನ ಸಾಮರ್ಥ್ಯದ ಮಕ್ಕಳ ಅಭಿವೃದ್ಧಿ ಕೇಂದ್ರ ಸ್ಥಾಪಕಿ ಕಮಲಾಕ್ಷಿ ಕುಂದರ್, ಕಾರ್ಯದರ್ಶಿ ಸಂತೋಷ್ ಕುಮಾರ್ ಟ್ರಸ್ಟಿಗಳಾದ ರಾಮಚಂದ್ರ ಕುಂದರ್, ಪದ್ಮನಾಭ ಸಾಲಿಯಾನ್, ನಿಶಾಲ್ ಜಿ.ವಿ., ಪೋಷಕರು ಮಕ್ಕಳು ಹಾಗೂ ಪ್ರಥ್ವಿ ಚಾರಿಟೇಬಲ್ ಟ್ರಸ್ಟ್, ಮೂಲಾತ್ವ ಟ್ರಸ್ಟ್ , ಶ್ರೀ ದುರ್ಗಾ ಟ್ರಸ್ಟಿನ ಸರ್ವ ಸದಸ್ಯರು ಉಪಸ್ಥಿತರಿದ್ದರು.