ಪಡುಕರೆ ರಸ್ತೆ ಪರಿಶೀಲಿಸಿದ ಸಂಸದ ಕೋಟ

kota
Published on

ಕೋಟ: ಇಲ್ಲಿನ ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಕರೆಯಲ್ಲಿ ಪರಿಶಿಷ್ಟ ಜಾತಿ- ಪಂಗಡ ಮನೆಗಳ ಹಾಗೂ ಕಡಲ ಕಿನಾರೆಗೆ ಸಂಪರ್ಕಿಸುವ 300 ಮೀಟರ್ ರಸ್ತೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬುಧವಾರ ಪರಿಶೀಲಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ 60 ಲಕ್ಷ ರೂ. ಅನುದಾನದಡಿ ರಸ್ತೆ ನಿರ್ಮಾಣಗೊಂಡಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಪಂಗಡದ ಮನೆಗಳಿವೆ. ಅಲ್ಲದೆ ಪ್ರವಾಸಿ ಕಡಲ ಕಿನಾರೆ ಕೇಂದ್ರವಾಗಿರುವ ಈ ವ್ಯಾಪ್ತಿಯ ಬಹುವರ್ಷದ ಬೇಡಿಕೆ ಸಾಕಾರಗೊಳಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ವಾರ್ಡ್ ಸದಸ್ಯೆ ವಿದ್ಯಾ ಸಾಲಿಯಾನ್ ಅವರ ಕಾರ್ಯವೈಖರಿಯನ್ನು ಸಂಸದರು ಪ್ರಶಂಸಿದರು. ಗ್ರಾಮಸ್ಥರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಸನ್ಮಾನಿಸಿದರು.

ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಂದರ್, ವಾರ್ಡ್ ಸದಸ್ಯೆ ವಿದ್ಯಾ ಸಾಲಿಯಾನ್, ಪಂಚಾಯಿತಿ ಸದಸ್ಯರಾದ ಸೀತಾ,ಪ್ರಮೋದ್ ಹಂದೆ, ವಾಸು ಪೂಜಾರಿ, ಜ್ಯೋತಿ, ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ, ಅಶ್ವಿನಿ ದಿನೇಶ್, ಮಾಜಿ ಅಧ್ಯಕ್ಷರಾದ ವಿಶ್ವಪ್ರಕಾಶನಿ ಹಂದೆ, ರಘು ತಿಂಗಳಾಯ, ಗ್ರಾಪಂ ಮಾಜಿ ಸದಸ್ಯರಾದ ರಾಮ ಬಂಗೇರ, ರಮಾನಂದ, ನಿರ್ಮಿತಿ ಕೇಂದ್ರದ ಗಣೇಶ್ ಶೆಟ್ಟಿ, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net