ದೋಣಿ ದುರಂತ ಸ್ಥಳಕ್ಕೆ ಶಾಸಕ ಗಂಟಿಹೊಳೆ ಭೇಟಿ

gan
Published on

ಗಂಗೊಳ್ಳಿ: ದೋಣಿ ದುರಂತ ಸಂಭವಿಸಿದ ಗಂಗೊಳ್ಳಿಯ ಬಂದರಿಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಬುಧವಾರ ಭೇಟಿ ನೀಡಿ ಸ್ಥಳೀಯ ಮೀನುಗಾರರ ಜತೆಗೆ ಸಮಾಲೋಚನೆ ನಡೆಸಿದರು.

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿ, ದೋಣಿ ದುರಂತದಿಂದ ಮೂರು ಕುಟುಂಬಗಳ ಆಧಾರಸ್ತಂಭ ಇಲ್ಲವಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯನ್ನೂ ಲೆಕ್ಕಿಸದೆ ಸಮುದ್ರಕ್ಕೆ ಇಳಿಯುವ ಸಾಹಸ ಮಾಡಬಾರದು. ಮೀನುಗಾರರು ಮೀನುಗಾರಿಕೆಗೆ ತೆರಳುವ ಮೊದಲು ಲ್ೈ ಜಾಕೆಟ್ ಧರಿಸಬೇಕು ಎಂದರು.

ಕರಾವಳಿ ರಕ್ಷಣಾ ಪಡೆಯವರು ಡ್ರೋನ್ ಬಳಸಿ ನಾಪತ್ತೆಯಾಗಿರುವ ಉಳಿದಿಬ್ಬರು ಮೀನುಗಾರರಿಗೆ ಶೋಧಿಸುತ್ತಿದ್ದು, ಶೌರ್ಯ ತಂಡ, ಮುಳುಗು ತಜ್ಞರು ಹಾಗೂ ಸ್ಥಳೀಯ ಪೊಲೀಸರು ಸಹಕರಿಸುತ್ತಿದ್ದಾರೆ ಎಂದು ಗಂಟಿಹೊಳೆ ಮಾಹಿತಿ ನೀಡಿದರು.

ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ಗಂಗೊಳ್ಳಿ ಠಾಣಾಧಿಕಾರಿ ಪವನ್ ನಾಯ್ಕ, ಮೀನುಗಾರ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net