

ಶಿರ್ವ: ಶಿರ್ವ ಶ್ರೀ ಸಿದ್ಧಿವಿನಾಯಕ ದೇವಳದ ನಾಲ್ಕನೇ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ ಮಂಗಳವಾರ ದೇವಳದ ಪ್ರಧಾನ ಅರ್ಚಕ ಗುರುಚರಣ್ ಭಟ್ ನೇತೃತ್ವದಲ್ಲಿ ನಡೆಯಿತು.
ಶ್ರೀನಿವಾಸ ತಂತ್ರಿ ಮಡುಂಬು ಮತ್ತು ಸಹ ವೈದಿಕರಿಂದ ಗಣಪತಿ ಹೋಮ, ನವಕ ಪ್ರಧಾನ ಹೋಮ, ವಿವಿಧ ಧಾರ್ಮಿಕ ಅನುಷ್ಠಾನಗಳು ನಡೆದವು. ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ದೇವಳದ ನಿರ್ಮಾಣ ಕಾರ್ಯದಲ್ಲಿ ಸಹಕಾರ ನೀಡಿದ ಸತೀಶ್ ಶೆಟ್ಟಿ ಮಲ್ಲಾರು ದಂಪತಿ ಪೂಜಾನುಷ್ಠಾನದಲ್ಲಿ ಪಾಲ್ಗೊಂಡರು. ರತ್ನಾಕರ ಕುಕ್ಯಾನ್ ಉಪಸ್ಥಿತರಿದ್ದರು. ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.