

ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಅತುಲ್ ಭಟ್, ಆದಿತ್ಯ, ಬಲರಾಮ್ ಭಾರದ್ವಜ್, ರಾಖಿ, ಅಲಕಾ ಮತ್ತು ರಜನಿ ಅವರಿಂದ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ಯಾನ್ವಾ ಬೇಸಿಕ್ಸ್ ಮತ್ತು ಐಒಟಿ ಅಪ್ಲಿಕೇಶನ್‌ಗಳ ಬಗ್ಗೆ ಮಾರ್ಗದರ್ಶನ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9 ಮತ್ತು 10 ನೇ ತರಗತಿಯ 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಟಿಂಕರಿಂಗ್ ಕ್ಯಾಡ್ ಬಳಸಿಕೊಂಡು ಹಾರ್ಡ್‌ವೇರ್ ಏಕೀಕರಣ, ಸಿಮ್ಯುಲೇಶನ್ ಮತ್ತು ಕ್ಯಾನ್ವಾ ಪ್ಲಾಟ್‌ಫಾರ್ಮ್ ಬಳಸಿಕೊಂಡು ಡಿಜಿಟಲ್ ಸೃಜನಶೀಲತೆಯ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಗಣಕಯಂತ್ರ ವಿಭಾಗದ ರಾಘವೇಂದ್ರ ಈಶ್ವರ ಹೆಗ್ಡೆ ಕಾರ್ಯಕ್ರಮ ಸಂಯೋಜಿಸಿದರು.