ರಣಮಂಗಲ ದೇವಳಕ್ಕೆ ಪದ್ಮರಾಜ್ ಆರ್.ಪೂಜಾರಿ ಭೇಟಿ

bheti
ರಣಮಂಗಲ ದೇವಸ್ಥಾನಕ್ಕೆ ಪದ್ಮರಾಜ್ ಆರ್.ಪೂಜಾರಿ ಭೇಟಿ ನೀಡಿದರು. ಆನುವಂಶಿಕ ಆಡಳಿತ ಮೋಕ್ತೆಸರ ಶ್ರೀಕೃಷ್ಣ ಬೊಳಿಲ್ಲಾಯ ಕಡಮಾಜೆ, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಡಾ.ರಾಜಾರಾಮ್ ಕೆ.ಬಿ ಮತ್ತಿತರರು ಇದ್ದರು.
Published on

ಪುತ್ತೂರು ಗ್ರಾಮಾಂತರ: ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಪಾಣಾಜೆ ಗ್ರಾಮದ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಕಾರ್ತಿಕಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ದೇವಸ್ಥಾನದ ಆನುವಂಶಿಕ ಆಡಳಿತ ಮೋಕ್ತೆಸರ ಶ್ರೀಕೃಷ್ಣ ಬೊಳಿಲ್ಲಾಯ ಕಡಮಾಜೆ ಸ್ವಾಗತಿಸಿ ಗೌರವಿಸಿದರು. ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಬಂಟ್ವಾಳ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಶೆಟ್ಟಿ, ಪ್ರಮುಖರಾದ ಡಾ.ರಾಜಾರಾಮ್ ಕೆ.ಬಿ, ಅನಿತಾ ಹೇಮನಾಥ ಶೆಟ್ಟಿ, ಶ್ರೀಪ್ರಕಾಶ್ ಪಾಣಾಜೆ, ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಕಮಲೇಶ್ ಸರ್ವೇದೊಳಗುತ್ತು, ನಾರಾಯಣ ನಾಯಕ್, ನವೀನ್ ರೈ ಚೆಲ್ಯಡ್ಕ, ಪುಷ್ಪರಾಜ್ ಶೆಟ್ಟಿ, ರಾಮ ನಾಯ್ಕ, ಸದಾನಂದ, ಶೀನಾ, ಮಾಧವ ಮಣಿಯಾಣಿ, ಬಾಬು ರೈ, ನಾರಾಯಣ ನಾಯ್ಕ, ಬಾಲಕೃಷ್ಣ ಪೂಜಾರಿ, ರಾಜೇಶ್ ಪೂಜಾರಿ, ದಿನೇಶ್ ಯಾದವ್, ಧನಂಜಯ, ಕಾರ್ತಿಕ್ ಡಿ.ಜಿ, ಸುಬ್ಬ ನಾಯ್ಕ, ಸಂತೋಷ್ ಅಮೀನ್, ಗಿರೀಶ್ ಗೋಳ್ವಲ್ಕರ್, ಸದಾಶಿವ ಶೆಟ್ಟಿ, ಅನಂತರಾಮ ಕೆದಂಬಾಡಿ, ರಾಮಣ್ಣ ನಾಯ್ಕ, ಪ್ರಶಾಂತ್, ಶೀನ ಪೂಜಾರಿ, ಕಿರಣ್ ನಾಯ್ಕ, ಬಾಬು ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಪದ್ಮರಾಜ್ ಆರ್.ಪೂಜಾರಿ ಆರ್ಲಪದವಿನ ಪೂಮಾಣಿ-ಕಿನ್ನಿಮಾಣಿ ದೈವಸ್ಥಾನಕ್ಕೆ ಭೇಟಿ ನೀಡಿ ಜೀರ್ಣೋದ್ಧಾರ ಕಾರ್ಯ ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net