

ಕುಂದಾಪುರ: ಬಹಳಷ್ಟು ರಾಜರು, ಬಹಳಷ್ಟು ನಮ್ಮೊಳೊಗಿನವರೆ ಪವಿತ್ರ ಸಭೆ ನಾಶ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಪವಿತ್ರ ಸಭೆ ನಾಶ ಆಗಲಿಲ್ಲ. ಪವಿತ್ರ ಸಭೆ ಆರಂಭವಾದದ್ದು ಪೆಂತೆ ಕೋಸ್ತ್ ದಿನದಂದು. ಅದು ಪವಿತ್ರ ಆತ್ಮನ ಶಕ್ತಿಯಿಂದ ಆರಂಭಗೊಂಡಿದ್ದು, ಇದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ ಎಂದು ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮ್ಯಾಕ್ಸಿಮ್ ನೊರೊನ್ಹಾ ಹೇಳಿದರು.
ಕೋಟೇಶ್ವರ ಕಟ್ಕೆರೆ ಬಾಲಯೇಸುವಿನ ಆಶ್ರಮದಲ್ಲಿ ಬಾಲಯೇಸುವಿನ ವಾರ್ಷಿಕ ಹಬ್ಬದಂದು ಪ್ರಧಾನ ಯಾಜಕರಾಗಿ ಪವಿತ್ರ ಬಲಿದಾನ ಅರ್ಪಿಸಿ ಸಂದೇಶ ನೀಡಿದರು. ಕುಂದಾಪುರ ವಲಯ ಪ್ರಧಾನ ಪಾವ್ಲ್ ರೇಗೊ, ಕುಂದಾಪುರ ವಲಯ ಇಗರ್ಜಿಗಳ ಧರ್ಮಗುರುಗಳು, ಕಾರ್ಮೆಲ್ ಪಂಗಡದ ಧರ್ಮ ಗುರುಗಳು, ಅತಿಥಿ ಧರ್ಮ ಗುರುಗಳು, ಕಾನ್ವೆಂಟ್ ಧರ್ಮಭಗಿನಿಯರು, ಕಟ್ಕೆರೆ ಬಾಲಯೇಸು ಆಶ್ರಮದ ಜೋ ತಾವ್ರೊ, ಜೋಸ್ವಿ ಸಿದ್ದಕಟ್ಟೆ ಉಪಸ್ಥಿತರಿದ್ದರು. ಕಟ್ಕೆರೆ ಬಾಲ ಯೇಸುವಿನ ಮುಖ್ಯಸ್ಥ ಪ್ರವೀಣ್ ಪಿಂಟೊ ವಂದಿಸಿ, ಶುಭ ಹಾರೈಸಿದರು.