

ಕೋಟ: ಯಕ್ಷಗಾನ ಕಲೆಗೆ ಕಲಾವಿದರ ಕೊಡುಗೆ ಅಪಾರ. ಇಂದು ಶಾಲಾ ಶಿಕ್ಷಣದ ಜತೆಗೆ ಯಕ್ಷಗಾನ ಶಿಕ್ಷಣ ನೀಡುತ್ತಿರುವುದು ಸಂತೋಷದಾಯಕ ಬೆಳವಣಿಗೆ ಎಂದು ಬ್ಯಾಂಕ್ ನಿವೃತ್ತ ಅಧಿಕಾರಿ ಯಕ್ಷ ಚಿಂತಕ ಡಾ.ಆನಂದ ರಾಮ ಉಪಾಧ್ಯ ಹೇಳಿದರು.
ಸಾಲಿಗ್ರಾಮ ಗುರುನರಸಿಂಹ ದೇವಳ ವಾರ್ಷಿಕ ರಥೋತ್ಸವ ದೇವರ ಅವಭೃತೋತ್ಸವ ಸಂದರ್ಭ ಕೋಟ ಹಂದೆ ಶ್ರೀ ಮಹಾವಿಷ್ಣು ಮಹಾಗಣಪತಿ ದೇವಾಲಯದ ರಂಗಮಂಟಪದಲ್ಲಿ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವತಿಯಿಂದ ಯಕ್ಷ ಚಿಂತಕ ಸುಜಯೀಂದ್ರ ಹಂದೆ ಎಚ್.ವಿರಚಿತ ರಾಜಾ ದ್ರುಪದ ಪ್ರಸಂಗ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಾಹಿತಿ, ಕಲಾಪೋಷಕ ಎಚ್.ಜನಾರ್ದನ ಹಂದೆ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾರ್ಕಡ ತಾರಾನಾಥ ಹೊಳ್ಳ, ಹಂದೆ ಶ್ರೀ ಮಹಾವಿಷ್ಣು ಮಹಾಗಣಪತಿ ದೇವಸ್ಥಾನ ಅಧ್ಯಕ್ಷ ಅಮರ ಹಂದೆ ಉಪಸ್ಥಿತರಿದ್ದರು. ಉಪನ್ಯಾಸಕ ರಾಘವೇಂದ್ರ ತುಂಗ ಕೆ. ಕಾರ್ಯಕ್ರಮ ನಿರ್ವಹಿಸಿದರು.
ಸುಜಯೀಂದ್ರ ಹಂದೆ ಎಚ್. ವಿರಚಿತ ರಾಜ ದ್ರುಪದ ಯಕ್ಷಗಾನ ಪ್ರದರ್ಶನ ನಡೆಯಿತು. ಕಲಾವಿದರಾಗಿ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಸುದೀಪ ಉರಾಳ, ಸುಜಯೀಂದ್ರ ಹಂದೆ, ತಮ್ಮಣ್ಣ ಗಾಂವ್ಕರ್, ಸಂಜೀವ ಹೆನ್ನಾಬೈಲು, ಡಾ.ಶಿವಕುಮಾರ್ ಅಲಗೋಡು, ಆದಿತ್ಯ ಹೆಗಡೆ, ನರಸಿಂಹ ತುಂಗ, ಶ್ರೀರಾಮ್ ಹೆಬ್ಬಾರ್, ಶಶಾಂಕ ಉರಾಳ, ರಾಜು ಪೂಜಾರಿ ಉಪಸ್ಥಿತರಿದ್ದರು. ಕೋಟ ಸುದರ್ಶನ ಉರಾಳ ಕಾರ್ಯಕ್ರಮ ಸಂಯೋಜಿಸಿದರು.