ವಿದ್ಯಾರ್ಥಿಗಳಲ್ಲಿ ಕನಸಿನ ಜತೆ ಕಲಿಕೆ ಶ್ರಮದಿಂದ ಬೆಳವಣಿಗೆ

bhuvanendra
ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಓರಿಯಂಟೇಷನ್ ಕಾರ್ಯಕ್ರಮವನ್ನು ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ.ಶಿವಾನಂದ ಪೈ ಉದ್ಘಾಟಿಸಿದರು
Published on

ಕಾರ್ಕಳ: ಬದುಕಿನ ಮಹತ್ತರ ನಿರ್ಣಯ ತೆಗೆದುಕೊಳ್ಳುವುದಕ್ಕೆ ಪದವಿ ಶಿಕ್ಷಣ ಸೂಕ್ತ. ವಿದ್ಯಾರ್ಥಿಗಳು ಬಹಳಷ್ಟು ಕ್ರಿಯಾಶೀಲವಾಗಿರಬೇಕಾದ ಅಗತ್ಯವಿದೆ. ಕನಸಿನ ಜತೆಗೆ ಕಲಿಕೆ ಶ್ರಮವೂ ಇದ್ದಾಗ ವಿದ್ಯಾರ್ಥಿಗಳ ಬೆಳವಣಿಗೆ ಆಗುತ್ತದೆ. ಅಂಕಗಳು ಹೇಗೆ ಮುಖ್ಯವೋ, ಉಳಿದ ಚಟುವಟಿಕೆ ಅಷ್ಟೇ ಮಹತ್ವದ್ದು ಅನ್ನುವ ಅರಿವು ವಿದ್ಯಾರ್ಥಿಗಳಿಗಿರಬೇಕು ಎಂದು ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ.ಶಿವಾನಂದ ಪೈ ಹೇಳಿದರು.
ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಓರಿಯಂಟೇಷನ್ ಕಾರ್ಯಕ್ರಮ ಉದ್ಫಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಮಂಜುನಾಥ ಎ.ಕೋಟ್ಯಾನ್ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ಶೈಕ್ಷಣಿಕ ಹಾಗೂ ಎಲ್ಲ ಕಾರ್ಯ ಚಟುವಟಿಕೆಗಳನ್ನು ಗಂಭೀರವಾಗಿ ತೊಡಗಿಸಿಕೊಳ್ಳುವುದು ನಿಮ್ಮ ಮೊದಲ ಆದ್ಯತೆಯಾಗಬೇಕು. ನಿಮ್ಮ ಆಯ್ಕೆ ಬಗ್ಗೆ ಗೌರವವಿರಬೇಕು. ಮಾನಸಿಕ ಬದಲಾವಣೆ ಈ ಶೈಕ್ಷಣಿಕ ಹಂತದಲ್ಲೇ ನಡೆಯಬೇಕು. ಪೂರ್ವ ತಯಾರಿ ಮತ್ತು ಕಠಿಣ ಶ್ರದ್ಧೆ ಮುಂದೆ ಬರುವಂತೆ ಮಾಡುತ್ತದೆ ಎಂದರು. ಐಕ್ಯುಎಸಿ ನಿರ್ದೇಶಕ ಪ್ರೊ.ನಾಗಭೂಷಣ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸೌರಭ ಪಾಠಕ್ ಪ್ರಾರ್ಥಿಸಿ, ಆಂಗ್ಲ ವಿಭಾಗದ ಶೃಂಗ ಸ್ವಾಗತಿಸಿ, ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ದತ್ತಾತ್ರೇಯ ಮಾರ್ಪಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net