

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ
ಯೋಗಾಸನ ಕೇವಲ ಆಸನವಲ್ಲ. ದೇಹ, ಮನಸ್ಸನ್ನು ಸ್ಥಿಮಿತದಲ್ಲಿಡುವ ಸಾಧನ. ಯೋಗ ವಿಚಾರ ಪುರಾಣಗಳಲ್ಲಿ ಉಲ್ಲೇಖವಿದೆ. ಯೋಗ ಗುರು ಪತಂಜಲಿ ಜಗತ್ತಿಗೆ ಬರಹ ರೂಪದಲ್ಲಿ ಅದನ್ನು ನೀಡಿದರು ಎಂದು ನಿವೃತ್ತ ಮುಖ್ಯ ಶಿಕ್ಷಕ ಶೇಖರ ಶೆಟ್ಟಿಗಾರ್ ಯಡಮಕ್ಕಿ ಹೇಳಿದರು. ಸಿದ್ದಾಪುರ ಸರಸ್ವತಿ ವಿದ್ಯಾಲಯ ಸಭಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, ಸರಸ್ವತಿ ವಿದ್ಯಾಲಯ ಸಿದ್ದಾಪುರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಪ್ರಾಂತ ಮಟ್ಟದ ಯೋಗಾಸನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾಧ್ಯಕ್ಷ ಟಿ.ಜಿ.ಪಾಂಡುರಂಗ ಪೈ ಅಧ್ಯಕ್ಷತೆ ವಹಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಡಿ.ಗೋಪಾಲಕೃಷ್ಣ ಕಾಮತ್, ಸದಸ್ಯ ಶ್ರೀನಾಥ್ ಪೈ, ವಿದ್ಯಾಭಾರತಿ ಕರ್ನಾಟಕ ಪ್ರಾಂತ ಯೋಗ ಶಿಕ್ಷಣ ಪ್ರಮುಖ್ ಮಂಜುನಾಥ ಬೆಂಗಳೂರು, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಹೈಕಾಡಿ, ಜಿಲ್ಲಾ ಯೋಗ ಪ್ರಮುಖ್ ಸಂಜಯ್, ಅಂಪಾರು ವಲಯ ಶಿಕ್ಷಣ ಸಂಯೋಜಕ ಶಂಕರ್ ಯು., ಮುಖ್ಯ ಶಿಕ್ಷಕಿ ಶ್ವೇತಾ, ಆಡಳಿತಾಧಿಕಾರಿ ಸೌಭಾಗ್ಯ, ಸರಸ್ವತಿ ಶಿಶು ಮಂದಿರ ಸಂಯೋಜಕಿ ಜಯಶೀಲ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರೀಯ ಯೋಗಾಸನ ತೀರ್ಪುಗಾರರಾದ ಅಶೋಕ, ಸವಿತಾ, ಸಬಿತ, ಅಮಿತ್, ಸುಜಾತ ಶೆಟ್ಟಿ, ಸಂಜೀವ್ ಮೊಗವೀರ, ಚೆನ್ನಮ್ಮ, ನವೀನ್, ಸುಮಾ, ಶರತ್ ತೀರ್ಪು ನೀಡಿದರು. ವಿದ್ಯಾರ್ಥಿಗಳು ಯೋಗ-ಯಕ್ಷಗಾನ ಸಮ್ಮಿಲನ ಸಾಂಸ್ಕೃತಿಕ ಪ್ರದರ್ಶನ ನೀಡಿದರು.
ಮುಖ್ಯ ಶಿಕ್ಷಕಿ ಶ್ವೇತಾ ಸ್ವಾಗತಿಸಿದರು. ಮಾತಾಜಿ ಶಶಿಕಲಾ ನಿರೂಪಿಸಿದರು. ಆಡಳಿತ ಅಧಿಕಾರಿ ಸೌಭಾಗ್ಯ ವಂದಿಸಿದರು.