ಕುಸ್ತಿಯಲ್ಲಿ ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

wristling
ತಾಲೂಕು ಮಟ್ಟದ ಕುಸ್ತಿ ಟೂರ್ನಿಯಲ್ಲಿ ಪ್ರಶಸ್ತಿ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಕಾರ್ಕಳ ಕ್ರೈಸ್ಟ್ ಕಿಂಗ್ ಸಂಸ್ಥೆ ವಿದ್ಯಾರ್ಥಿಗಳ ತಂಡ
Published on

ಕಾರ್ಕಳ:ಎಸ್‌ವಿಟಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕುಸ್ತಿ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹನ್ನೆರಡು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ವಿಭಾಗದಿಂದ ಆರನೇ ತರಗತಿ ಮೊಹಮ್ಮದ್ ಅಯಾನ್, ಮೊಹಮ್ಮದ್ ಹಿಶಾಮ್ ಖಾನ್, ಶೇಖ್ ಮೊಹಮ್ಮದ್ ಶಿಫಾನ್, ಸೈಯದ್ ಫಾಹಿಕ್, ಏಳನೇ ತರಗತಿಯ ಸಾಕ್ಷಿತ್ ಪಿ.ಜೈನ್, ದೃವೀತ್, ಐಶ್ವರ್ಯ ಪೂಜಾರಿ, ಫಿಯೋನಾ ರಿಯಾ ಪಿಂಟೋ ಹಾಗೂ ಪ್ರೌಢಶಾಲಾ ವಿಭಾಗದಿಂದ ಎಂಟನೇ ತರಗತಿಯ ಆಯುಶ್ರೀ ಎಂ.ಆಚಾರ್ಯ, ರಿತು ಫ್ರಾನ್ಸಿಸ್, ಸಾನ್ವಿ ಎಂ.ನಾಯಕ್, ಒಂಬತ್ತನೇ ತರಗತಿಯ ರೇಚಲ್ ಡಿಸೋಜ ಚಿನ್ನದ ಪದಕ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆರನೇ ತರಗತಿ ತನಿಷ್ ಟಿ.ಶೆಟ್ಟಿ, ಸಾಧ್ವಿ ಎಂ.ನಾಯಕ್, ಏಳನೇ ತರಗತಿ ಸಾನ್ವಿ ಶೆಟ್ಟಿ, ಒಂಬತ್ತನೇ ತರಗತಿ ಲೆನಿಷಾ ಲಿಯಾನ್ನ ಮೆಂಡೊನ್ಸಾ ದ್ವಿತೀಯ ಸ್ಥಾನ ಪಡೆದುಕೊಂಡರು. ಸಂಸ್ಥೆ ದೈಹಿಕ ಶಿಕ್ಷಣ ಶಿಕ್ಷಕರಾದ ಲಾವಣ್ಯಾ ಶೆಟ್ಟಿ ತರಬೇತಿ ನೀಡಿದ್ದು, ಪ್ರಕಾಶ್ ನಾಯ್ಕ ಹಾಗೂ ಕೃಷ್ಣಪ್ರಸಾದ್ ತಂಡಗಳ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net