ಭಗವಾನ್ ಬಾಹುಬಲಿಗೆ ಅವಮಾನ: ಅಯೂಬ್​ ಖಾನ್, ನಟ ಪ್ರಥಮ್​ ವಿರುದ್ಧ ಜೈನರ ಪ್ರತಿಭಟನೆ

Jain
Published on

ಬಾಗಲಕೋಟೆ: ಭಗವಾನ್ ಬಾಹುಬಲಿಗೆ ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿದ್ದ ಜೆಡಿಎಸ್​ ಮುಖಂಡ ಅಯೂಬ್​ ಖಾನ್​, ನಟ ಪ್ರಥಮ್ ಹಾಗೂ ಪ್ರಕಾಶ್ ಸುಡಾಳ ವಿರುದ್ಧ ಜೈನ ಸಮುದಾಯದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ, ಪ್ರತಿಭಟನೆಯನ್ನೂ ಕೈಗೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಪ್ರತಿಭಟನೆ ಮಾಡುವ ಜತೆಗೆ ಬಹಿರಂಗ ಸಭೆಯನ್ನು ಆಯೋಜಿಸಿರುವ ಜೈನ ಸಮುದಾಯದವರು, ಅಯೂಬ್​ ಖಾನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಮಹಾವೀರ ವೃತ್ತದಿಂದ ಮಾರುಕಟ್ಟೆ, ಗುಮ್ಮಟಗಲ್ಲಿ ಮೂಲಕ ತಹಸೀಲ್ದಾರ್ ಕಚೇರಿವರೆಗೂ ಮೆರವಣಿಗೆಯಲ್ಲಿ ತೆರಳಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸಭೆ ನಡೆಸಿದರು. ಜೈನ ಸಮುದಾಯಕ್ಕೆ ಅಪಮಾನ ಮಾಡಿರುವ ಆರೋಪಿಗಳ ವಿರುದ್ದ ಎಫ್​ಐಆರ್​ ದಾಖಲಿಸುವಂತೆ ಆಗ್ರಹಿಸಿದರು.

ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ, ತೇರದಾಳ ಭಾಗದ ಜೈನ ಸಮುದಾಯದವರು ಪ್ರತಿಭಟನೆಯಲ್ಲಿದ್ದರು. ತ್ಯಾಗಮೂರ್ತಿ ಭಗವಾನ್ ಬಾಹುಬಲಿಗೆ ಅಪಮಾನ ಮಾಡಿ ಜೈನ ಸಮಾಜದವರ ಭಾವನೆಗೆ ಧಕ್ಕೆ ತಂದಿದ್ದಾರೆ. ಮೈಸೂರಿನ ಅಯೂಬ್ ಖಾನ್, ಬೆಂಗಳೂರಿನ ಪ್ರಥಮ್​ ಹಾಗೂ ಪ್ರಕಾಶ್ ಸುಡಾಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net