ಭೀಮಾ ತೀರದಲ್ಲಿ ಮತ್ತೆ ರಕ್ತದೋಕುಳಿ! ಜಿಲ್ಲಾ ಪಂಚಾಯ್ತಿ ಸದಸ್ಯನ ಸಹೋದರನ ಬರ್ಬರ ಹತ್ಯೆ

bhima
Published on

ಕಲಬುರಗಿ: ಸದಾ ಸುದ್ದಿಯಲ್ಲಿರುವ ಭೀಮಾ ತೀರದಲ್ಲಿ ಇದೀಗ ಮತ್ತೊಂದು ಭೀಕರ ಕೊಲೆ ನಡೆದಿದೆ. ಜಿಲ್ಲಾ ಪಂಚಾಯತಿ ಸದಸ್ಯನ ಸಹೋದರನನ್ನೇ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಬಳ್ಳುಂಡಗಿ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಜಿಲ್ಲಾ ಪಂಚಾಯತಿ ಸದಸ್ಯ ಶಾಂತಪ್ಪ ಕುಡಲಗಿ ಅವರ ಸಹೋದರ ಹನುಮಂತ ಕುಡಲಗಿ ಅವರನ್ನು ಕೊಲೆ ಮಾಡಲಾಗಿದೆ. ಮೊದಲಿಗೆ ಹನುಮಂತ ಅವರ ಕಾರು ಅಪಘಾತ ಮಾಡಿ ಆಮೇಲೆ ರಾಡ್​ನಿಂದ ಹೊಡೆಯಲಾಗಿದೆ. ನೆಲೋಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net