

ಬೆಂಗಳೂರು: ಕೆಜಿಎಫ್, ಉಗ್ರಂನಂತಹ ಟಾಪ್ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಪ್ರಶಾಂತ್ ನೀಲ್ ಕರೊನಾ ಲಸಿಕೆ ಪಡೆದುಕೊಂಡಿದ್ದಾರೆ. ನಾನು ಲಸಿಕೆ ಪಡೆದೆ, ನೀವೂ ನಿಮ್ಮ ಕುಟುಂಬದೊಂದಿಗೆ ಲಸಿಕೆ ಪಡೆದು ಸುರಕ್ಷಿತವಾಗಿರಿ ಎಂದು ಅವರು ಮಾಡಿರುವ ಟ್ವೀಟ್ ಇದೀಗ ಭಾರೀ ವೈರಲ್ ಆಗಿದೆ.
ಪ್ರಶಾಂತ್ ನೀಲ್ ತಾವು ಲಸಿಕೆ ಪಡೆಯುತ್ತಿರುವ ಫೋಟೋವನ್ನೂ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರ ಎಡಗೈಗೆ ನರ್ಸ್ ಇಂಜೆಕ್ಷನ್ ಕೊಡುತ್ತಿದ್ದರೆ, ಅವರು ಬಲಗಡೆ ತಿರುಗಿಕೊಂಡು ಕೈನಿಂದ ಕಣ್ಣು ಮುಚ್ಚಿಕೊಂಡಿರುವುದನ್ನು ಕಾಣಬಹುದು. ಮಾಸ್ ಸಿನಿಮಾಗಳನ್ನು ನಿರ್ದೇಶಿಸಿರುವ ಮಾಸ್ ಡೈರೆಕ್ಟರ್ ಈ ರೀತಿ ಕಣ್ಣು ಮುಚ್ಚಿ ಕುಳಿತಿದ್ದನ್ನು ನೋಡಿ ಅನೇಕ ಸೆಲೆಬ್ರಿಟಿಗಳು ಸೇರಿ ಅಭಿಮಾನಿಗಳು ಪ್ರತಿಕ್ರಿಯಿಸಲಾರಂಭಿಸಿದ್ದಾರೆ.
ಬಾಲಿವುಡ್ ನಟಿ ರವಿನಾ ಟೆಂಡನ್ ಕೂಡ ಪ್ರಶಾಂತ್ ಅವರ ಟ್ವೀಟ್ಗೆ ರಿಪ್ಲೇ ಮಾಡಿದ್ದಾರೆ. ಪ್ರಶಾಂತ್ ಇದು ತುಂಬಾ ಕ್ಯೂಟ್ ಆಗಿದೆ. ನಾನು ಲಸಿಕೆ ಪಡೆದ ವಿಡಿಯೋವನ್ನು ನೀವು ನೋಡಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಸಾಕಷ್ಟು ಅಭಿಮಾನಿಗಳು ಕೂಡ ಪ್ರಶಾಂತ್ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ. ಇಂಜೆಕ್ಷನ್ ಕೊಡುತ್ತಿದ್ದರೆ ಕಣ್ಣು ಮುಚ್ಚಿಕೊಂಡಿದ್ದು ಏಕೆ? ಇದೇನು ಭಯವೋ ಅಥವಾ ನಾಚಿಕೆಯೋ? ಉಗ್ರಂ, ಕೆಜಿಎಫ್ನಂತಹ ಸಿನಿಮಾ ನಿರ್ದೇಶಿಸಿದವರಿಗೆ ಭಯವಿರಲು ಸಾಧ್ಯವಿಲ್ಲ, ಇದು ನಾಚಿಕೆಯೇ ಇರಬೇಕು ಎಂದು ಕಾಮೆಂಟ್ ಮಾಡಲಾರಂಭಿಸಿದ್ದಾರೆ. (ಏಜೆನ್ಸೀಸ್)