ನಾಳೆ ಇಲ್ಲ ಒನಕೆ ಓಬವ್ವ ಜಯಂತಿ ದಿನಾಚರಣೆ: ನಿನ್ನೆಯಷ್ಟೇ ಘೋಷಣೆ, ಇಂದು ಮುಂದೂಡಿಕೆ; ಕಾರಣ...

Onake Obavva
Published on

ಬೆಂಗಳೂರು: ನಾಳೆ ರಾಜ್ಯಾದ್ಯಂತ ಆಚರಣೆ ಆಗಬೇಕಿದ್ದ ಒನಕೆ ಓಬವ್ವ ಜಯಂತಿ ಮುಂದೂಡಲ್ಪಟ್ಟಿದೆ. ಒನಕೆ ಓಬವ್ವ ಅವರ ಗೌರವಾರ್ಥ ನ. 11ನೇ ತಾರೀಕನ್ನು ಒನಕೆ ಓಬವ್ವ ಜಯಂತಿ ಎಂದು ಸರ್ಕಾರ ನಿನ್ನೆಯಷ್ಟೇ ಘೋಷಣೆ ಮಾಡಿತ್ತು. ಮಾತ್ರವಲ್ಲ, ನ. 11ರಂದು ರಾಜ್ಯಾದ್ಯಂತ ಜಯಂತಿ ಆಚರಣೆ ಆಗಲಿದೆ ಎಂದೂ ಹೇಳಿತ್ತು.

ಆದರೆ ಅದರ ಬೆನ್ನಿಗೇ ವಿಧಾನಪರಿಷತ್ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ನಿನ್ನೆಯಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನ. 11ರಂದು ಆಚರಿಸಬೇಕಿದ್ದ ಒನಕೆ ಓಬವ್ವ ಜಯಂತಿಯನ್ನು ಮುಂದೂಡಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ. ಡಿ. 10ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದ್ದು, 14ರಂದು ಮತ ಎಣಿಕೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net