ಆಯುರ್ವೇದ ಚಿಕಿತ್ಸಾಲಯಕ್ಕೆ ಅಧಿಕಾರಿಗಳ ಭೇಟಿ

officer
ಕಾಲ್ತೋಡು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಕ್ಕೆ ಶುಕ್ರವಾರ ದೆಹಲಿಯ ಎನ್‌ಎಬಿಎಚ್ ಸಂಸ್ಥೆ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು.
Published on

ಬೈಂದೂರು: ತಾಲೂಕಿನ ಕಾಲ್ತೋಡು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಕ್ಕೆ ಶುಕ್ರವಾರ ದೆಹಲಿಯ ಎನ್‌ಎಬಿಎಚ್ ಸಂಸ್ಥೆ ಅಧಿಕಾರಿಗಳು ಭೇಟಿ ನೀಡಿ ದಾಖಲೆ ಹಾಗೂ ಸಾರ್ವಜನಿಕರಿಗೆ ಸಿಗುವ ಸೇವೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಕಾಲ್ತೋಡು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಆಯುಷ್ಮಾನ್ ಆರೋಗ್ಯ ಮಂದಿರವೆಂದು ಉನ್ನತೀಕರಣಗೊಂಡ ಹಿನ್ನೆಲೆಯಲ್ಲಿ ರೋಗಿಗಳ ಚಿಕಿತ್ಸೆ ಮತ್ತು ಚಿಕಿತ್ಸಾಲಯದ ಗುಣಮಟ್ಟ, ಚಿಕಿತ್ಸಾಲಯದ ಸ್ವಚ್ಛತೆ, ದಾಖಲಾತಿ ಕಡತ, ಐಇಸಿ ಚಟುವಟಿಕೆ, ಯೋಗ ತರಬೇತಿ, ಔಷದ ಸಸ್ಯವನ ಪರಿಶೀಲಿಸಿದರು. ನಂತರ ಸಾರ್ವಜನಿಕರೊಂದಿಗೆ ಚರ್ಚಿಸಿ ಚಿಕಿತ್ಸಾಲಯದಿಂದ ನೀಡಲಾಗುವ ಸೌಲಭ್ಯ ಮತ್ತು ದಾಖಲೆಗಳು ಉತ್ಕೃಷ್ಟವಾಗಿದೆ ಎಂದು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ವೀಣಾ ಕಾರಂತ್ ಮತ್ತು ಸಿಬ್ಬಂದಿ ವರ್ಗವನ್ನುಪ್ರಶಂಸಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ ಆಚಾರ್ಯ, ಯೋಗ ತರಬೇತುದಾರರಾದ ಸರಸ್ವತಿ ಕುಲಾಲ್, ಶೇಖರ ಶೆಟ್ಟಿ, ಆಶಾ ಕಾರ್ಯಕರ್ತೆ ಚಂದು ಕುಲಾಲ್, ಸಿಬ್ಬಂದಿ ನಾಗದೀಪ, ವಿಶಾಲ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net