

ಉಳ್ಳಾಲ: ಸೋಮೇಶ್ವರ ಉಚ್ಚಿಲದ ಖಾಸಗಿ ಬೀಚ್ ರೆಸಾರ್ಟ್ ಈಜುಕೊಳಕ್ಕೆ ಇಳಿದಿದ್ದ ಮೈಸೂರು ಮೂಲದ ಮೂವರು ಯುವತಿಯರು ಭಾನುವಾರ ಬೆಳಗ್ಗೆ ಮತಪಟ್ಟಿದ್ದಾರೆ.
ಮೈಸೂರು ಕುರುಬರಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ನಿಶಿತಾ ಎಂ.ಡಿ.(21), ಮೈಸೂರು ರಾವಾನುಜ ರಸ್ತೆ ಕೆ.ಆರ್.ಮೊಹಲ್ಲಾ ನಿವಾಸಿ ಪಾರ್ವತಿ ಎಸ್.(20), ಮೈಸೂರು ವಿಜಯನಗರ ದೇವರಾಜ ಮೊಹಲ್ಲಾ ನಿವಾಸಿ ಕೀರ್ತನಾ ಎನ್.(21) ಮೃತಪಟ್ಟ ಯುವತಿಯರು. ಶನಿವಾರ ಬೆಳಗ್ಗೆ ಸೋಮೇಶ್ವರಕ್ಕೆ ಬಂದಿದ್ದ ಯುವತಿಯರು ರೆಸಾರ್ಟ್ಗೆ ಬಂದಿದ್ದರು. ಮೂವರು ಯುವತಿಯರು ರೂಮ್ ನಂ.2ರಲ್ಲಿ ತಂಗಿದ್ದರು. ಇಂದು ಬೆಳಗ್ಗೆ ಹತ್ತು ಗಂಟೆ ಸುವಾರಿಗೆ ರೆಸಾರ್ಟ್ ಮುಂಭಾಗದಲ್ಲಿ ಈಜುಕೊಳಕ್ಕಿಳಿದು ನೀರಾಟ ಆಡುತ್ತಿದ್ದ ವೇಳೆ ಮುಳುಗಿ ಮೃತಪಟ್ಟಿದ್ದಾರೆ.
ಈಜುಕೊಳ 4ರಿಂದ 6 ಅಡಿ ವಾತ್ರ ಆಳವಿದ್ದು, ಅದರಲ್ಲೂ ಅರ್ಧ ಅಡಿ ನೀರು ಕಡಿಮೆಯಿತ್ತು. 10.02 ಗಂಟೆಗೆ ನೀರಿಗಿಳಿದ ಅವರು ಕೇವಲ 2 ನಿಮಿಷ ಆಟವಾಡಿದ್ದಾರೆ. ಈ ಸಂದರ್ಭ ಓರ್ವ ಯುವತಿ ಟ್ಯೂಬ್ ತರಲು ಹೋಗಿದ್ದು, ಟ್ಯೂಬ್ ಹಿಡಿದು ಬಿಟ್ಟಿದ್ದಾಳೆ. ಮತ್ತೆ ಮಧ್ಯಭಾಗದಿಂದ ಹೋಗಿದ್ದು, ಆಳದಲ್ಲಿ ನಿಯಂತ್ರಣ ಸಿಕ್ಕಿಲ್ಲ. ಇನ್ನೊಬ್ಬಳು ಬದುಕಿಸಲು ಹೋದಾಗ ಆಕೆಯೂ ಆಳಕ್ಕೆ ಹೋಗಿದ್ದಾಳೆ. ಇದೆಲ್ಲವನ್ನೂ ಕೆಲ ಕ್ಷಣಗಳವರೆಗೆ ನೋಡುತ್ತಾ ನಿಂತಿದ್ದ ಮೂರನೆಯವಳು ಕೊನೆಗೆ ತಾನೂ ಇಬ್ಬರ ರಕ್ಷಣೆಗಾಗಿ ಧುಮುಕಿ ನಿಯಂತ್ರಣ ಸಿಗದೆ ಮುಳುಗಿದ್ದಾರೆ. ಐದಾರು ನಿಮಿಷದಲ್ಲೇ ಮೂವರ ಪ್ರಾಣ ಹೋಗಿದೆ. ಈಜುಕೊಳ ರೆಸಾರ್ಟ್ನ ಮುಂಭಾಗದಲ್ಲೇ ಇದೆ. ಟನೆ ನಡೆದ ಸಂದರ್ಭ ರೆಸಾರ್ಟ್ನಲ್ಲಿ ಸಿಬ್ಬಂದಿ ವಾತ್ರವಲ್ಲದೆ ಇತರರೂ ಇದ್ದರು ಎನ್ನಲಾಗಿದೆ. ಅಲ್ಲದೆ ಯುವತಿಯರು ಮುಳುಗಡೆಯಾದ ಜಾಗದಲ್ಲಿ ಕೇವಲ ಐದೂವರೆ ಅಡಿಯಷ್ಟು ನೀರಿತ್ತು. ಮೊದಲಿಗೆ ಯುವತಿ ಮುಳುಗಡೆಯಾಗುವ ಸಂದರ್ಭದಲ್ಲೇ ಇಬ್ಬರು ಯುವತಿಯರು ಆಕೆಯನ್ನು ರಕ್ಷಿಸುವ ಅವಕಾಶವಿತ್ತು. ರೆಸಾರ್ಟ್ಗೆ ಹೋಗಿ ವಾಹಿತಿ ನೀಡಿದ್ದರೂ ರಕ್ಷಿಸಬಹುದಿತ್ತು. ಇಲ್ಲವೇ ಈಜುಕೊಳದಿಂದಲೇ ರಕ್ಷಣೆಗಾಗಿ ಬೊಬ್ಬೆ ಹೊಡೆದರೂ ಬದುಕಿಸುವ ಅವಕಾಶವಿತ್ತು.
ಆದರೆ ಒಬ್ಬಳು ವಾತ್ರ ರಕ್ಷಣೆಗೆ ಮುಂದಾಗಿದ್ದಾಳೆ. ಆಕೆಯೂ ಮುಳುಗಡೆಯಾಗುತ್ತಿದ್ದಾಗ ಮೂರನೇಯವಳು ನಿಂತು ನೋಡುವ ಬದಲು ರಕ್ಷಣೆಗಾಗಿ ಇತರರ ಸಹಾಯ ಯಾಚಿಸಬಹುದಿತ್ತು. ಯಾರೊಬ್ಬರೂ ಅಂಥ ಪ್ರಯತ್ನ ವಾಡಿರಲಿಲ್ಲ. ಕಣ್ಣ ಮುಂದೆಯೇ ಸ್ನೇಹಿತೆಯರು ನೀರಿನಲ್ಲಿ ಮುಳುಗಡೆಯಾಗುವಾಗ ಭಯದಿಂದ ಒತ್ತಡಕ್ಕೆ ಸಿಲುಕಿದ್ದೇ ಮೂವರು ಜತೆಯಾಗಿಯೇ ಪ್ರಾಣಬಿಡಲು ಕಾರಣ ಎಂದು ಹೇಳಲಾಗಿದೆ. ರೆಸಾರ್ಟ್ ಸಿಬ್ಬಂದಿ ಈಜುಕೊಳದತ್ತ ಬಂದು ನೋಡಿದಾಗ ಟನೆ ಬೆಳಕಿಗೆ ಬಂದಿದೆ. ಯುವತಿಯರು ನೀರಲ್ಲಿ ಆಟವಾಡಿರುವುದು ಹಾಗೂ ಮುಳುಗುತ್ತಿರುವ ದಶ್ಯಗಳು ರೆಸಾರ್ಟ್ನ ಸಿಸಿಟಿವಿಯಲ್ಲಿ ದಾಖಲಾಗಿದೆ. ಪೊಲೀಸರು ಡಿವಿಆರ್, ರೆಸಾರ್ಟ್ ವಾಲೀಕನನ್ನು ವಶಕ್ಕೆ ಪಡೆದಿದ್ದಾರೆ.
ಟನೆ ಬೆಳಗ್ಗೆ 10:10ಕ್ಕೆ ನಡೆದಿದ್ದು, ಭಾನುವಾರ ಉಳ್ಳಾಲ ತಹಸೀಲ್ದಾರ್ ರಜೆಯಲ್ಲಿದ್ದ ಕಾರಣ ಟನಾ ಸ್ಥಳಕ್ಕೆ ಬಂದಿರಲಿಲ್ಲ. ಪೊಲೀಸರು ಸ್ಥಳ ಮಹಜರು ಹಾಗೂ ಇತರ ಕಾರ್ಯಗಳನ್ನು ಪೂರೈಸುವ ಸಂದರ್ಭ ಮೃತದೇಹಗಳನ್ನು ಮೂರು ಆಂಬುಲೆನ್ಸ್ಗಳಲ್ಲಿ ಇಡಲಾಗಿತ್ತು. ಮಂಗಳೂರು ತಹಸೀಲ್ದಾರ್ ಪ್ರಶಾಂತ್ ಪಾಟೀಲ್ ಅವರಿಗೆ ವಾಹಿತಿ ನೀಡಲಾಗಿದ್ದು, ಅವರು ಮಧ್ಯಾಹ್ನ 2:30ಕ್ಕೆ ಮಂಗಳೂರಿಗೆ ಆಗಮಿಸಿದರು. ಅವರು ಆಗಮಿಸುವ ಹತ್ತು ನಿಮಿಷಗಳ ಮೊದಲು ಮತದೇಹ ರವಾನೆ ವಾಡಲಾಗಿತ್ತು.
ಈ ಖಾಸಗಿ ರೆಸಾರ್ಟ್ ಸುವಾರು 25 ವರ್ಷ ಹಿಂದಿನದ್ದಾಗಿದ್ದು, ಅಧಿಕೃತವೂ ಆಗಿದೆ. ರೆಸಾರ್ಟ್ ವಾಲೀಕ ವಿದೇಶದಲ್ಲಿದ್ದು, ಮನೋಹರ್ ಪುತ್ರನ್ ಎಂಬವರು ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೆಸರನ್ನು ಸಾಯಿರಾಮ್ ಮಂಗಳೂರು ಬೀಚ್ ರೆಸಾರ್ಟ್ ಎಂದು ಬದಲಾಯಿಸಲಾಗಿದೆ. ಇದಕ್ಕೆ ಪ್ರವಾಸೋದ್ಯಮ ಇಲಾಖೆ ಮತ್ತು ಸೋಮೇಶ್ವರ ಪುರಸಭೆಯಿಂದ ಪರವಾನಗಿಯೂ ಇದೆ. ಇದರಲ್ಲಿ ಎಂಟು ಕೋಣೆಗಳಿವೆ. ಆದರೂ ಪಹರೇದಾರರ ಸಹಿತ ಸರ್ಕಾರದ ನಿಯಮಗಳನ್ನು ಪಾಲಿಸದೆ ನಿರ್ಲಕ್ಷಿಸಲಾಗಿದೆ. ಒಂದು ವೇಳೆ ಪಹರೇದಾರರಿದ್ದರೆ ಮೂವರ ಪ್ರಾಣ ಉಳಿಸಬಹುದಿತ್ತು. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಕಾರಣ ಸೋಮೇಶ್ವರ ಪುರಸಭೆಯಿಂದ ರೆಸಾರ್ಟ್ ಸೀಜ್ ವಾಡಲಾಗಿದೆ.
ಪೊನ್ನುರಾಜ್ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಇಲ್ಲಿ ಕಾನೂನುಬಾಹಿರವಾಗಿದ್ದ ಕೆಲವು ರೆಸಾರ್ಟ್ಗಳನ್ನು ತೆರವುಗೊಳಿಸಲಾಗಿತ್ತು. ನಂತರದ ದಿನಗಳಲ್ಲಿ ಆ ಕೆಲಸ ನಡೆದಿಲ್ಲ. ಈಗಲೂ ಇಲ್ಲಿ ಹಲವು ರೆಸಾರ್ಟ್ಗಳು ಕಾನೂನುಬಾಹಿರವಾಗಿ ನಡೆಸಲಾಗುತ್ತಿದೆ ಎನ್ನುವ ದೂರುಗಳಿದ್ದು, ಇಲ್ಲಿಗೆ ಯಾರು ಬರುತ್ತಾರೆ, ಹೋಗುತ್ತಾರೆ, ಇಲ್ಲಿ ಏನು ನಡೆಯುತ್ತದೆ ಎನ್ನುವ ವಾಹಿತಿ ಯಾರಿಗೂ ಇರುವುದಿಲ್ಲ ಎನ್ನುವ ವಾತುಗಳು ಸ್ಥಳೀಯರದ್ದಾಗಿದೆ.
ಈ ಭಾಗದಲ್ಲಿ ಹಲವು ರೆಸಾರ್ಟ್ಗಳಿದ್ದು ಸಾಕಷ್ಟು ದೂರುಗಳೂ ಇವೆ. ಆದರೂ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಯಾತ್ರಿಕರು ಬರುವ ಬಗ್ಗೆಯೂ ರೆಸಾರ್ಟ್ಗಳಿಂದ ವಾಹಿತಿ ಸಿಗುತ್ತಿಲ್ಲ. ರೆಸಾರ್ಟ್ಗಳನ್ನು ಪಂಚಾಯಿತಿ ಮಟ್ಟದಲ್ಲಿ ನಿಯಂತ್ರಣ ಅಸಾಧ್ಯ. ಇಲ್ಲಿ ಮುಂಜಾಗ್ರತೆ ವಹಿಸಿದ್ದರೆ ಮೂವರ ಪ್ರಾಣ ಹೋಗುತ್ತಿರಲಿಲ್ಲ ಎಂದು ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷ ರವಿಶಂಕರ್ ತಿಳಿಸಿದ್ದಾರೆ.
ಯುವತಿಯರು ಮೈಸೂರಿನ ಜಿಎಸ್ಎಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯರು. ಶನಿವಾರ ಬೆಳಗ್ಗೆ 11ಕ್ಕೆ ರೆಸಾರ್ಟ್ಗೆ ಆಗಮಿಸಿದ್ದು, ದಿನವಿಡೀ ಕಡಲ ಕಿನಾರೆ ಹಾಗೂ ವಿವಿಧ ಭಾಗಕ್ಕೆ ತೆರಳಿದ್ದರು. ಭಾನುವಾರ 11ಕ್ಕೆ ಕೋಣೆ ತೊರೆಯಬೇಕಿತ್ತು. ಅದಕ್ಕಿಂತ ಒಂದು ಗಂಟೆ ಮೊದಲು 10 ಗಂಟೆಗೆ ಈಜುಕೊಳದತ್ತ ಧಾವಿಸಿದ್ದಾರೆ. ದಂಡೆಯಲ್ಲಿ ಹೊರ ಉಡುಪುಗಳನ್ನು ಕಳಚಿಟ್ಟಿದ್ದು, ಆರಂಭದಲ್ಲಿ ಇಬ್ಬರು ನೀರಿಗಿಳಿದು ಆಟವಾಡಿದ್ದಾರೆ. ಈ ಸಂದರ್ಭ ಓರ್ವ ಯುವತಿ ಐಫೋನ್ ಮೊಬೈಲ್ನಲ್ಲಿ ದಶ್ಯಗಳನ್ನು ಸೆರೆ ಹಿಡಿದಿದ್ದು, ಬಳಿಕ ಆಕೆಯೂ ಮೊಬೈಲ್ ಹಿಡಿದುಕೊಂಡೇ ನೀರಿಗಿಳಿದಿದ್ದು, ನಂತರ ಶೂಟಿಂಗ್ ಮೋಡ್ನಲ್ಲೇ ಮೊಬೈಲ್ ದಂಡೆಯ ಮೇಲಿಟ್ಟು ಮೂವರು ಎರಡು ನಿಮಿಷ ಆಟವಾಡಿದ್ದಾರೆ.
ಮೈಸೂರಿನಲ್ಲಿ ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರು ವಾರಾಂತ್ಯದ ರಜೆಯಲ್ಲಿ ಪ್ರವಾಸ ಬಂದು ಶನಿವಾರ ಈ ರೆಸಾರ್ಟ್ನಲ್ಲಿ ತಂಗಿದ್ದರು. ಭಾನುವಾರ ಬೆಳಗ್ಗೆ ಈಜುಕೊಳಕ್ಕೆ ಇಳಿದು ಆಟವಾಡುತ್ತಿದ್ದಾಗ ದುರಂತ ನಡೆದಿದೆ. ಓರ್ವಳು ಹೆಚ್ಚು ಆಳ ಇರುವಲ್ಲಿ ಸಿಲುಕಿಕೊಂಡಾಗ ಇನ್ನಿಬ್ಬರು ಆಕೆಯ ರಕ್ಷಣೆಗೆ ಹೋಗಿ ನೀರಿನಲ್ಲಿ ಮುಳುಗಿದ್ದಾರೆ. ಮೂವರಿಗೂ ಈಜು ಬರುತ್ತಿರಲಿಲ್ಲ. ರೆಸಾರ್ಟ್ ಮಾಲೀಕರು ಈಜುಕೊಳದ ನಿಯಮಾವಳಿ ಉಲ್ಲಂಘಿಸಿರುವುದು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ. ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಿಲ್ಲ. ಲೈಫ್ ಗಾರ್ಡ್ ನೇಮಕ ಮಾಡಿಲ್ಲ. ಆಳ ಎಷ್ಟಿದೆ ಎನ್ನುವ ಮಾಹಿತಿ ಹಾಕಿಲ್ಲ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುವುದು. ಅನುಪಮ್ ಅಗರ್ವಾಲ್, ಮಂಗಳೂರು ನಗರ ಪೊಲೀಸ್ ಆಯುಕ್ತ https://www.vijayavani.net/untouchability-still-alive-today https://www.vijayavani.net/mangalore-padavinangadi-benaka-bala-samskara-kendra-inaguration