

ಉಡುಪಿ: ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಂಬಲಪಾಡಿಯ ದಯಾನಂದ ವಿ. (64) ಭಾನುವಾರ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ವಾಡಿಕೊಂಡಿದ್ದಾರೆ. ಅವಿವಾಹಿತರಾಗಿದ್ದ ಅವರು, 20 ವರ್ಷದ ಹಿಂದೆ ಮುಂಬೈಯಿಂದ ಉಡುಪಿಗೆ ಬಂದು ಸಹೋದರಿ ಮನೆಯಲ್ಲಿ ವಾಸ್ತವ್ಯ ವಾಡಿದ್ದರು. ಒಂದು ತಿಂಗಳ ಹಿಂದೆ ಸರಿಯಾಗಿ ಊಟ ಸೇವಿಸದ ಕಾರಣ ರಕ್ತ ಪರೀಕ್ಷೆ ವಾಡಿಸಿದ್ದು, ಜಾಂಡೀಸ್ ಲಕ್ಷಣ ಇರುವುದಾಗಿ ತಿಳಿದು ಬಂದಿತ್ತು. ಹೀಗಾಗಿ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿದ ಬಳಿಕ ಲಿವರ್ ಕ್ಯಾನ್ಸರ್ ಇರುವುದಾಗಿ ತಿಳಿಸಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ವಾಡಿಕೊಂಡಿದ್ದಾಗಿ ಸಹೋದರಿ ದೂರು ನೀಡಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.