ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗೆ ಸರಬರಾಜು ಮಾಡಿದ್ದ ಲೋಟ-ತಟ್ಟೆ ಬಿಲ್​ ಪಾಸ್​​ಗೂ ಲಂಚ ಕೇಳಿ ಸಿಕ್ಕಿಬಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ

Bribe
ಸಾಂದರ್ಭಿಕ ಚಿತ್ರ
Published on

ಕೋಲಾರ: ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗೆ ಸರಬರಾಜು ಮಾಡಿದ್ದ ಲೋಟ-ತಟ್ಟೆಗೆ ಸಂಬಂಧಿಸಿದ ಬಿಲ್ ಪಾಸ್ ಮಾಡಲಿಕ್ಕೂ ಲಂಚ ಕೇಳಿದ ಜಿಲ್ಲಾ ಶಸ್ತ್ರಚಿಕಿತ್ಸಕ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಕೋಲಾರದ ಎಸ್​ಎನ್​ಆರ್​​ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಿ.ಎಸ್​. ರವಿಕುಮಾರ್ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಚೇರಿಯಲ್ಲೇ 25 ಸಾವಿರ ರೂಪಾಯಿ ಪಡೆಯುವಾಗ ಸಿಕ್ಕಿಹಾಕಿಕೊಂಡಿದ್ದಾನೆ.

ಕೋವಿಡ್​ ಸಂದರ್ಭದಲ್ಲಿ ಕಿರಣ್​ಕುಮಾರ್ ಎಂಬವರು ಆಸ್ಪತ್ರೆಗೆ ಲೋಟ-ತಟ್ಟೆ ಸರಬರಾಜು ಮಾಡಿದ್ದರು. ಆದರೆ ಬಿಲ್ ಪಾಸ್​ ಮಾಡಲು 25 ಸಾವಿರ ರೂಪಾಯಿ ಲಂಚ ಕೇಳಿದ್ದ. ಈ ಬಗ್ಗೆ ಕಿರಣ್​ಕುಮಾರ್​ ಎಸಿಬಿಗೆ ತಿಳಿಸಿದ್ದರು. ಎಸಿಬಿ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net