ನಟೋರಿಯಸ್ ರೌಡಿಶೀಟರ್ ಗೊಣ್ಣೆವಿಜಿಗೆ ಗುಂಡೇಟು!

gonne viji case
Published on

ಬೆಂಗಳೂರು: ನಟೋರಿಯಸ್ ರೌಡಿಶೀಟರ್ ವಿಜಯ್ ಕುಮಾರ್ ಅಲಿಯಾಸ್​ ಗೊಣ್ಣೆವಿಜಿ ಕಾಲಿಗೆ ಗುಂಡೇಟು ಬಿದ್ದಿದೆ.

ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ವೀರಭದ್ರನಗರ ಸಿಗ್ನಲ್ ಬಳಿ ಗಿರಿನಗರ ಪಿಎಸ್​ಐ ವಿನಯ್ ಅವರಿಂದ ಆರೋಪಿ ಎಡಗಾಲಿಗೆ ಗಂಡೇಟು ಬಿದ್ದಿದೆ. ಆರೋಪಿ ಕಒಂದು ವಾರದ ಹಿಂದಷ್ಟೇ ಜೈಲಿಂದ ಬಿಡುಗಡೆಯಾಗಿದ್ದ. ಇದನ್ನೂ ಓದಿರಿ ವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್​ಆ್ಯಪ್​ ಸ್ಟೇಟಸ್

ಕೊಲೆ, ಕೊಲೆಯತ್ನ, ಧಮ್ಕಿ, ದರೋಡೆ ಸೇರಿ 18 ಪ್ರಕರಣಗಳಲ್ಲಿ ಗೊಣ್ಣೆವಿಜಿ ಭಾಗಿಯಾಗಿದ್ದ. ಇತ್ತೀಚಿಗೆ ಜೈಲಿಂದ ಹೊರ ಬಂದಿದ್ದ ಆರೋಪಿಯು ಗಿರಿನಗರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ. ಭಾನುವಾರ ರಾತ್ರಿ ಆರೋಪಿ ವೀರಭದ್ರನಗರಕ್ಕೆ ಬರುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದ ಪಿಎಸ್​ಐ ವಿನಯ್ ನೇತೃತ್ವದ ತಂಡ, ಶರಣಾಗುವಂತೆ ವಿಜಿಗೆ ತಿಳಿಸಿದ್ದರು.

ಸರೆಂಡರ್ ಆಗದೆ ಪೊಲೀಸ್ ಪೇದೆ ಮಧು ಅವರ ಎಡಭುಜಕ್ಕೆ ವಿಜಿ ಡ್ಯಾಗರ್​ನಿಂದ ಹಲ್ಲೆ ಮಾಡಿದ್ದ. ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ. ಗಾಯಾಳು ಪೇದೆ ಮಧು ಹಾಗೂ ಗುಂಡೇಟು ತಿಂದ ಆರೋಪಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net