ನಾಮಪತ್ರ ಹಿಂಪಡೆಯದಿದ್ದರೆ ನಿನ್ನ ಹೆಂಡತಿಯನ್ನು ಬಿಡೋದಿಲ್ಲ: ಪಿಸ್ತೂಲ್​ ತೋರಿಸಿ ಬೆದರಿಕೆ ಆರೋಪ!

Gun
Published on

ಕಲಬುರಗಿ: ಗ್ರಾಮ ಪಂಚಾಯಿತಿಯ ಮೊದಲ ಹಂತದ ಮತದಾನ ಇಂದು ಆರಂಭಾಗಿದ್ದು, ಮತದಾರರ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಇನ್ನೊಂದೆಡೆ ಎರಡನೇ ಹಂತದ ಪ್ರಚಾರ ಕಾರ್ಯವೂ ಸಹ ಭರದಿಂದ ಸಾಗಿದೆ. ಇದರ ನಡುವೆ ನಾಮಪತ್ರ ಹಿಂಪಡೆಯಲು ಗನ್​ ತೋರಿಸಿ ಬೆದರಿಕೆ ಹಾಕಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ಎದುರಾಳಿ ಅಭ್ಯರ್ಥಿ ಪಿಸ್ತೂಲ್ ತೋರಿಸಿ ಬೆದರಿಸಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಯಲ್ಲೆ ಇದ್ದುಕೊಂಡು ಸಂಚು ರೂಪಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಿದ್ದಾರೆ.

ಘಟನೆಯ ವಿವರಣೆಗೆ ಬರುವುದಾದರೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗುಡೂರ ಪಂಚಾಯ್ತಿಗೆ ಮಹಾಲಕ್ಷ್ಮಿ ಪೂಜಾರಿ ಎಂಬುವರು ಸ್ಪರ್ಧಿಸಿದ್ದರು. ಕಣದಿಂದ ಹಿಂದೆ ಸರಿಸಲು ಮಹಾಲಕ್ಷ್ಮಿ ಗಂಡ ಶರಣಪ್ಪ ಪೂಜಾರಿಯನ್ನ ಎದುರಾಳಿ ಬೀರಲಿಂಗ ಪೂಜಾರಿ ಬೆದರಿಕೆ ಹಾಕಿದ್ದಾರೆ.

ಬಿರಲಿಂಗ ಪೂಜಾರಿ ತನ್ನ ತಾಯಿಯನ್ನು ಗೆಲ್ಲಿಸೋದಕ್ಕೆ ಬೆದರಿಸಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದ್ದಾರೆ. ಶರಣಪ್ಪನನ್ನು ಕಾರಿನಲ್ಲಿ ಪಂಚಾಯ್ತಿಗೆ ಕರೆದುಕೊಂಡು ಹೋಗಿ ಬೀರಲಿಂಗ ತನ್ನ ಬೆಂಬಲಿಗರ ಜತೆ ಸೇರಿ ಬೆದರಿಕೆ ಹಾಕಿದ್ದ. ನಾಮಪತ್ರ ವಾಪಸ್ ಪಡೆಯದೆ ಹೊದ್ರೆ ನಿನ್ನ ಮನೆ ಬಳಿ ನಮ್ಮವರು ಇದ್ದಾರೆ ನಿನ್ನ ಹೆಂಡತಿಯನ್ನು ಬಿಡೋದಿಲ್ಲ ಎಂದು ಹೆದರಿಸಿದ್ದ. ಈ ಹಿನ್ನಲೆ ಹೆಂಡತಿಯ ನಾಮಪತ್ರಕ್ಕೆ ಸೂಚಕನಾಗಿದ್ದ ಗಂಡ ಶರಣಪ್ಪ ಪೂಜಾರಿ ನಾಮಪತ್ರ ವಾಪಸ್ ಪಡೆದಿದ್ದಾನೆ.

ಇದೀಗ ಹೆದರಿಸಿ ನಾಮಪತ್ರ ವಾಪಸ್ ಹಿಂಪಡೆಯುವಂತೆ ಮಾಡಿದ್ದಾರೆಂದು ಜೇವರ್ಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net