12 ವರ್ಷವಾದರೂ ನೀರಿನ‌ ಹಾಹಾಕಾರಕ್ಕೆ ಸಿಕ್ಕಿಲ್ಲ ಮುಕ್ತಿ! ಮೂರು ದಿನಕ್ಕೆ ಒಮ್ಮೆ ಮಾತ್ರ ಇಲ್ಲಿ ನೀರು

WhatsApp Image 2024-05-18 at 12.06.44 PM
Published on

ಬಾಗಲಕೋಟೆ: ನೀರಿನ‌ ಹಾಹಾಕಾರಕ್ಕೆ 12 ವರ್ಷವಾದರೂ ಸಿಗದ ಮುಕ್ತಿಗೆ ಜನಸಾಮಾನ್ಯರು ತೀವ್ರ ಕಂಗೆಟ್ಟಿದ್ದು, ಪಟ್ಟಣಕ್ಕೆ ಹೊಂದಿಕೊಂಡಿದ್ರು, ಅಲ್ಲಿನ ನಿವಾಸಿಗಳ ನೀರಿನ ಪರದಾಟ ಮಾತ್ರ ಬಗೆಹರಿಯದ ಸಮಸ್ಯೆಯಾಗಿ ಕಾಡುತ್ತಿದೆ. ಗುಳೇದಗುಡ್ಡ ತಾಂಡದ ಜನರಿಗೆ ಜೀವಜಲದ ತೊಂದರೆ ಹೆಚ್ಚಾಗಿದ್ದು, ಇಲ್ಲಿ ಮೂರು ದಿನಕ್ಕೆ ಒಮ್ಮೆ ಮಾತ್ರ ನೀರು ಬರುತ್ತದೆ ಎಂದು ನಿವಾಸಿಗಳು ಅಧಿಕಾರಿಗಳ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ್ದಾರೆ.

ತಾಂಡಾ ನಿವಾಸಿಗಳಿಗೆ ನೀರಿನ ದಾಹ ತೀರಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಏರ್ ವಾಲ್ ಸಂಪ್​ಗೆ ಇಳಿದು ನೀರು ತುಂಬುವ ಜನರು, ಅಂದಾಜು 60 ಕುಟುಂಬಗಳು ವಾಸ ಮಾಡುವ ಈ ಸ್ಥಳದಲ್ಲಿ ಕನಿಷ್ಟ ಒಂದು ಕೈ ಬೋರ್ ಸಹ ಇಲ್ಲ ಎಂದು ಆರೋಪಿಸಿದ್ದಾರೆ. ನಾವು ನೀರಿಗಾಗಿ ಪರದಾಡೋದು ತಪ್ಪಿಲ್ಲ, ಪಟ್ಟಣಕ್ಕೆ ಹೊಂದಿಕೊಂಡಿದ್ರು ಸಹ ಕುಡಿಯೋ ನೀರಿಗೆ ಊರೂರು ಅಲೆಯುವಂತೆ ಪರಿಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ವರ್ಷ ಪೂರ್ತಿಯೂ ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡೋದು ಮಾತ್ರ ತಪ್ಪಿಲ್ಲ. ನೀರಿನ‌ ಸಮಸ್ಯೆ ಬಗೆಹರಿಸಿ ಎನ್ನುವ ಜನರ ಕೂಗಿಗೆ ಇಲ್ಲಿ ಸ್ಪಂದನೆಯೇ ಇಲ್ಲ. ತಮ್ಮ ಕಷ್ಟಕ್ಕೆ ಸ್ಪಂದಿಸದ ಗುಳೇದಗುಡ್ಡ ಪುರಸಭೆ ಆಡಳಿತಕ್ಕೆ ನಿವಾಸಿಗಳು ಛೀಮಾರಿ ಹಾಕಿದ್ದು, ನೀರಿನ ಸಮಸ್ಯೆಯಿಂದ ಮುಕ್ತಿ ದೊರಕುವಂತೆ ಮಾಡಿ ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net