ಗಂಡನ ಮನೆಯಲ್ಲಿ ನವವಿವಾಹಿತೆ ಆತ್ಮಹತ್ಯೆ! ಮದ್ವೆ ಆದ 2 ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ್ದೇಕೆ?

suicide case
Published on

ಧಾರವಾಡ: ಗಂಡನ ಮನೆಯಲ್ಲೇ ನವವಿವಾಹಿತೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಮ್ಮಿಗಟ್ಟಿಯಲ್ಲಿ ಸಂಭವಿಸಿದೆ.

ಮಮ್ಮಿಗಟ್ಟಿಯ ಮಂಜುನಾಥ ಹಂಚಿನಮನಿ ಅವರ ಪತ್ನಿ ರಂಜಿತಾ ಹಂಚಿನಮನಿ (19) ಮೃತ ದುರ್ದೈವಿ. ಎರಡು ತಿಂಗಳ ಹಿಂದಷ್ಟೇ ರಂಜಿತಾ ಮತ್ತು ಮಂಜುನಾಥನ ಮದುವೆ ಆಗಿತ್ತು. ಇಂದು ಗಂಡನ ಮನೆಯಲ್ಲೇ ಸೀರೆಯಿಂದ ನೇಣು ಬಿಗಿದುಕೊಂಡು ಸತ್ತಿದ್ದಾಳೆ. ಇದನ್ನೂ ಓದಿರಿ ಮೊದಲ ರಾತ್ರಿಯೇ ಮದುಮಗಳ ದುರಂತ ಸಾವು! ಮದ್ವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎರಡೇ ತಿಂಗಳಿಗೆ ಮಗಳು ಬಾರದ ಲೋಕಕ್ಕೆ ಹೋದ ಸುದ್ದಿ ಕೇಳುತ್ತಿದ್ದಂತೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಮಗಳು ಸತ್ತಿದ್ದಾಳೆ ಎಂದು ರಂಜಿತಾಳ ಪಾಲಕರು ಆರೋಪಿಸಿದ್ದಾರೆ. ಗರಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net