

ಹಾಸನ: 'ಹೀರೋ' ಸಿನಿಮಾ ಚಿತ್ರೀಕರಣದ ವೇಳೆ ಬೆಂಕಿ ಅವಘಡ ಸಂಭವಿಸಿದ್ದು, ದೊಡ್ಡ ಗಂಡಾಂತರದಿಂದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಮತ್ತು ನಟಿ ಗಾನವಿ ಪಾರಾಗಿದ್ದಾರೆ.
ಹಾಸನದ ಬೇಲೂರು ಬಳಿ ಶೂಟಿಂಗ್ ನಡೆಯುತ್ತಿತ್ತು. ಆ್ಯಕ್ಷನ್ ಸೀನ್ ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಸಿಡಿದಿದೆ. ಆ ಬೆಂಕಿ ರಿಷಬ್ ಶೆಟ್ಟಿಗೆ ತಾಗಿದ್ದು, ಅವರ ತಲೆ ಕೂದಲು ಸುಟ್ಟಿರುವ ಹಾಗೂ ಬೆನ್ನಿನ ಮೇಲೆ ಸುಟ್ಟ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಪೆಟ್ರೋಲ್ ಬಾಂಬ್ ಸಿಡಿದ ವೇಳೆ ಕೊಂಚ ಯಾಮಾರಿದ್ರು ನಟ ರಿಷಬ್ ಶೆಟ್ಟಿ ಮತ್ತು ನಟಿ ಗಾನವಿ ಪ್ರಾಣಕ್ಕೆ ಅಪಾಯವಿತ್ತು. ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರಿಂದ ಅದೃಷ್ಟವಶಾತ್ ಹೆಚ್ಚಿನ ಅನಾವುತ ಸಂಭವಿಸಿಲ್ಲ.