More

    ಕಾಲೇಜು ಕಟ್ಟಡದಿಂದ ಜಿಗಿದು ಬಿಇ ವಿದ್ಯಾರ್ಥಿ ಆತ್ಮಹತ್ಯೆ! ಡೆತ್​ನೋಟ್​ ಪತ್ತೆ, ಸಹಪಾಠಿಗಳ ಪ್ರತಿಭಟನೆ

    ಬೆಂಗಳೂರು: ಬಿಐಟಿ ಕಾಲೇಜಿನ 7ನೇ ಮಹಡಿ ಮೇಲಿಂದ ಜಿಗಿದು ಇಂಜಿನಿಯರಿಂಗ್​ ವಿದ್ಯಾರ್ಥಿ ಜಯಂತ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದ್ದಾರೆ.

    ವಿವಿ ಪುರಂನಲ್ಲಿರುವ ಬೆಂಗಳೂರು ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಜಯಂತ್ ರೆಡ್ಡಿ ಬಿಇ 3ನೇ ಸೆಮಿಸ್ಟರ್​ ಓದುತ್ತಿದ್ದ. ಸೋಮವಾರ ಬೆಳಗ್ಗೆ 9.30ಕ್ಕೆ ಕಾಲೇಜಿನ 7ನೇ ಮಹಡಿಯಲ್ಲಿ ಓಡಾಡಿಕೊಂಡಿದ್ದ ಜಯಂತ್, ಇದ್ದಕ್ಕಿದ್ದಂತೆ ಮೇಲಿಂದ ಹಾರಿ ಪ್ರಾಣ ಬಿಟ್ಟಿದ್ದಾನೆ. ಸಾವಿಗೂ ಮುನ್ನ ಆತ ಬರೆದಿಟ್ಟಿದ್ದ ಡೆತ್​ನೋಟ್​ ಸಿಕ್ಕಿದೆ. ಇದನ್ನೂ ಓದಿರಿ ಮೊದಲ ರಾತ್ರಿಯೇ ಮದುಮಗಳ ದುರಂತ ಸಾವು! ಮದ್ವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    ಆಂಧ್ರ ಮೂಲದ ಜಯಂತ್ ರೆಡ್ಡಿ(22) ದೊಡ್ಡ ಬೊಮ್ಮಸಂದ್ರದಲ್ಲಿ ವಾಸವಾಗಿದ್ದ. ಮೊದಲೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ ಕಾಲೇಜಿಗೆ ಬಂದಿದ್ದ ಈತ, ಒಂದು ಪುಟದ ಡೆತ್​ನೋಟ್​ ಬರೆದಿಟ್ಟಿದ್ದ ಎನ್ನಲಾಗಿದೆ. ಸದ್ಯ ಅವನ ಹೆಸರಲ್ಲಿ ಸಿಕ್ಕಿರುವ ಡೆತ್​ನೋಟ್​ನಲ್ಲಿ ‘ದಿನೇದಿನೆ ಸಾಯೋ ಬದಲು ಒಮ್ಮೆಲೆ ಸಾಯೋದು ಮೇಲು’ ಎಂದು ಬರೆಯಲಾಗಿದೆ. ಈ ಹಿಂದೆ ಎರಡು ಬಾರಿ ಮನೋವೈದ್ಯರನ್ನು ಈತ ಭೇಟಿಯಾಗಿದ್ದನಂತೆ. ಆದರೆ ಯಾವ ವಿಚಾರವಾಗಿ ಖಿನ್ನತೆಗೆ ಒಳಗಾಗಿದ್ದ ಅನ್ನೋದರ ಬಗ್ಗೆ ಡೆತ್​ನೋಟ್​ನಲ್ಲಿ ಬರೆದಿಲ್ಲ. ಜಯಂತ್​ರೆಡ್ಡಿಗೆ ಚಿಕಿತ್ಸೆ ನೀಡಿದ್ದ ಮನೋವೈದ್ಯರನ್ನು ಪೊಲೀಸರು ಭೇಟಿ ಮಾಡಲಿದ್ದಾರೆ.

    ಇನ್ನು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಕಾಲೇಜು ಮುಂಭಾಗ ಜಮಾಯಿಸಿದ ವಿದ್ಯಾರ್ಥಿಗಳು ಧರಣಿಗೆ ಕುಳಿತರು. ವಿಟಿಯು ಯಡವಟ್ಟಿನಿಂದ ಜಯಂತ್​ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಂದೊಂದು ಪರೀಕ್ಷೆಗೆ ನಾಲ್ಕು ದಿನ ಗ್ಯಾಪ್ ಸಿಕ್ತಾ ಇತ್ತು. ಆದರೆ ಈಗ ಒಂದು ದಿನ ಮಾತ್ರ ಗ್ಯಾಪ್ ಕೊಡ್ತಿದ್ದಾರೆ. ಇದರಿಂದ ನಾವು ಓದೋದಕ್ಕೂ ಸಮಯ ಸಾಕಾಗ್ತಿಲ್ಲ. ಆನ್​ಲೈನ್​ನಲ್ಲಿ ಪಾಠ ಮಾಡಿದ್ದಾರೆ. ಈಗ ಒಂದು ದಿನದ ಅಂತರದಲ್ಲಿ ಓದಿ ಪರೀಕ್ಷೆ ಬರೆಯೋಕೆ ಕಷ್ಟ ಆಗ್ತಿದೆ ಎಂದು ಆಕ್ರೋಶ ಹೊರಹಾಕಿದರು. ಮೃತ ವಿದ್ಯಾರ್ಥಿ ಓದಿನಲ್ಲಿ ಮುಂದಿದ್ದ, ಡಿಪ್ಲೊಮಾದಲ್ಲಿ ಶೇ.94ರಷ್ಟು ಅಂಕ ಗಳಿಸಿದ್ದ. ಆದರೆ ಸಾವಿನ ಮನೆಯ ಕದ ತಟ್ಟೆದ್ದೇಕೆ ಎಂಬುದು ತನಿಖೆ ಬಳಿಕ ಗೊತ್ತಾಗಲಿದೆ. ಇದನ್ನೂ ಓದಿರಿ ಪ್ರಾಣಾಪಾಯದಿಂದ ನಟ ರಿಷಬ್​ ಶೆಟ್ಟಿ, ನಟಿ ಗಾನವಿ ಜಸ್ಟ್ ಮಿಸ್​!

    ಇನ್ನು ಮುಂಜಾಗ್ರತ ಕ್ರಮವಾಗಿ ಕಾಲೇಜಿನಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಈ ವೇಳೆ ಮಾತನಾಡಿದ ಪ್ರಾಂಶುಪಾಲ ಎಂ.ಯು.ಅಶ್ವಥ್, 42 ವರ್ಷದಿಂದ ಇಂತಹ ಘಟನೆ ಸಂಭವಿಸಿರಲಿಲ್ಲ. ಇದೊಂದು ದುರಂತ ಘಟನೆ. ಮೃತಪಟ್ಟ ಯುವಕ ತುಂಬಾ ಇಂಟೆಲಿಜೆಂಟ್. ಈಗಾಗ್ಲೆ ಅವರ ಪೋಷಕರ ಜೊತೆ ಮಾತನಾಡಿದ್ದೇವೆ. ಅವರಿಗೆ ಸಾಂತ್ವನ ಹೇಳುತ್ತಿದ್ದೇವೆ. ವಿದ್ಯಾರ್ಥಿಗಳು ಧೃತಿಗೆಡಬಾರದು. ನಮಗೆ ವಿದ್ಯಾರ್ಥಿಗಳ ಭವಿಷ್ಯವೇ ಮುಖ್ಯ. ನಾನು ಏಕಾಏಕಿ ಪರಿಕ್ಷೆ ಕೈ ಗೊಂಡಿಲ್ಲ. ಯೂನಿರ್ವಸಿಟಿಯಲ್ಲಿ ಚರ್ಚಿಸಿ ವಿದ್ಯಾರ್ಥಿಗಳು-ಪೋಷಕರ ಜೊತೆ ಮಾತುಕತೆ ನಡೆಸಿದ ಬಳಿಕವಷ್ಟೇ ಪರಿಕ್ಷೆ ನಡೆಸುತ್ತಿದ್ದೇವೆ. ಅಕಾಡೆಮಿಕ್ ಇಯರ್ ಪ್ರಕಾರ ಮಾರ್ಕ್ಸ್ ಕಾರ್ಡ್ ವ್ಯಾಲಿಡಿಟಿ ಬೇಕಂದ್ರೆ ತಕ್ಕ ಸಮಯಕ್ಕೆ ಪರಿಕ್ಷೆ ಆಗಬೇಕು. ಹಾಗಾಗಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದರು.

    ಡೆತ್​ನೋಟ್​ ಬರೆದಿಟ್ಟು ಹೈಸ್ಕೂಲ್​ ಶಿಕ್ಷಕ ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಶಿಕ್ಷಕ

    ಮೊದಲ ರಾತ್ರಿಯೇ ಮದುಮಗಳ ದುರಂತ ಸಾವು! ಮದ್ವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    ಬಿಗ್​ ಬಾಸ್​ ಮನೆಗೆ ಹೋಗೋಕೆ ಎಚ್​.ವಿಶ್ವನಾಥ್​ ರೆಡಿ!

    ಪ್ರಾಣಾಪಾಯದಿಂದ ನಟ ರಿಷಬ್​ ಶೆಟ್ಟಿ, ನಟಿ ಗಾನವಿ ಜಸ್ಟ್ ಮಿಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts