

ಬೆಂಗಳೂರು: ಕನ್ನಡ ಕಿರಿತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 8 ಭಾನುವಾರ ಅದ್ದೂರಿಯಾಗಿ ಆರಂಭವಾಗಿದೆ. ಎಲ್ಲ 17 ಸ್ಪರ್ಧಿಗಳನ್ನೂ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್ ಆತ್ಮೀಯವಾಗಿ ಬರ ಮಾಡಿಕೊಂಡು ಬಿಗ್ಬಾಸ್ ಮನೆಯೊಳಗೆ ಕಳುಹಿಸಿಕೊಟ್ಟಿದ್ದು, ಇಂದಿನಿಂದ ಅಸಲಿ ಆಟ ಶುರುವಾಗಿದೆ.
ಈ ನಡುವೆ ಬಿಗ್ ಬಾಸ್ ಮನೆಯಲ್ಲಿ ರಾಜಕಾರಣದ ಕಿಡಿ ಹೊತ್ತಿಸಲು ಮಾಜಿ ಸಚಿವರೂ ಆದ ಬಿಜೆಪಿ ಮುಖಂಡ ಎಚ್.ವಿಶ್ವನಾಥ್ ತುದಿಗಾಲಲ್ಲಿ ನಿಂತಿದ್ದಾರೆ. ಇದನ್ನೂ ಓದಿರಿ ಪ್ರಾಣಾಪಾಯದಿಂದ ನಟ ರಿಷಬ್ ಶೆಟ್ಟಿ, ನಟಿ ಗಾನವಿ ಜಸ್ಟ್ ಮಿಸ್!
ಬಿಗ್ಬಾಸ್ ಸೀಸನ್ 6ರಲ್ಲಿ ಪಾಲ್ಗೊಳ್ಳುವಂತೆ ನನಗೆ ಈ ಹಿಂದೆಯೇ ಕರೆ ಬಂದಿತ್ತು. ಆರೋಗ್ಯದ ಸಮಸ್ಯೆ ಇದ್ದ ಕಾರಣ ನಾನು ಹೋಗಿರಲಿಲ್ಲ. ಈಗ ಅವಕಾಶ ಸಿಕ್ಕರೆ ಹೋಗಲು ರೆಡಿ ಇದ್ದೇನೆ ಎಂದರು.
ಈ ಬಾರಿ ಯಾರೆಲ್ಲ ಬಿಗ್ಬಾಸ್ ಮನೆಗೆ ಪ್ರವೇಶಿಸಿದ್ದಾರೆ ಗೊತ್ತಾ?
1. ಧನುಶ್ರೀ- ಟಿಕ್ಟಾಕ್ ಸ್ಟಾರ್
2. ಶುಭಾ ಪೂಂಜಾ- ನಟಿ
3. ಶಂಕರ್ ಅಶ್ವಥ್- ಹಿರಿಯ ನಟ
4. ವಿಶ್ವಾ– ಗಾಯಕ
5. ವೈಷ್ಣವಿ- ಕಿರುತೆರೆ ನಟಿ
6. ಬ್ರೋ ಗೌಡ – ಗಾಯಕ
7. ಅರವಿಂದ್– ಬೈಕ್ ರೇಸರ್
8. ಮಂಜು ಪಾವಗಡ- ಮಜ ಭಾರತ ಕಲಾವಿದ
9. ಚಂದ್ರಕಲಾ- ಪುಟ್ಟಗೌರಿ ಧಾರಾವಾಹಿಯ ಅಜ್ಜಮ್ಮ
10. ದಿವ್ಯಾ- ಕಿರುತೆರೆ ನಟಿ
11. ಗೀತಾ– ಬ್ರಹ್ಮಗಂಟು ಧಾರಾವಾಹಿ
12. ರಾಜೀವ್- ಕ್ರಿಕೆಟರ್
13. ನಿರ್ಮಲಾ ಚೆನ್ನಪ್ಪ- ಧಾರಾವಾಹಿ ನಿರ್ಮಾಪಕಿ
14. ನಿಧಿ ಸುಬ್ಬಯ್ಯಾ- ನಟಿ
15. ಪ್ರಶಾಂತ್ ಸಂಬರಗಿ- ಮಾಧ್ಯಮ ವರದಿಗಾರ
16. ರಘು ಗೌಡ- ಟಿಕ್ಟಾಕ್ ಸ್ಟಾರ್
17. ದೀಪಿಕಾ- ಕಿರುತೆರೆ ನಟಿ