ರಸ್ತೆ ಬದಿಯ ಮುಳ್ಳುಕಂಟಿಯಲ್ಲಿ ಪತ್ತೆಯಾಯಿತು ನವಜಾತ ಶಿಶು!

featured
Published on

ವಿಜಯಪುರ: ನವಜಾತ ಶಿಶುಗಳು ಅನಾಥ ಆಗುವಂಥ ಪ್ರಕರಣಗಳು ಮುಂದುವರಿದಿದ್ದು, ಇಂದು ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಬಳಿ ರಸ್ತೆಬದಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ.

ಮಗು ಅಳುವ ಧ್ವನಿ ಕೇಳಿ ಸ್ಥಳೀಯರು ಗಮನಿಸಿದಾಗ ಅಲ್ಲಿನ ಮುಳ್ಳುಕಂಟಿಯಲ್ಲಿ ನವಜಾತ ಶಿಶು ಇರುವುದು ಕಂಡುಬಂದಿತ್ತು. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮುಳ್ಳುಕಂಟಿಯಲ್ಲಿ ಎಸೆಯಲಾಗಿದ್ದ ಹೆಣ್ಣು ಶಿಶುವನ್ನು ರಕ್ಷಿಸಿದ್ದಾರೆ.

ಹೆಣ್ಣು ಮಗು ಎಂಬ ಕಾರಣಕ್ಕೆ ಅಥವಾ ವಿವಾಹಪೂರ್ವ ಜನನದ ಹಿನ್ನೆಲೆಯಲ್ಲಿ ತಾಯಿ ಇಲ್ಲವೇ ಕುಟುಂಬದವರು ಶಿಶುವನ್ನು ಮುಳ್ಳು ಕಂಟಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಮಗುವನ್ನು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಇರಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.‘

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net