More

    ಮೊದಲು ನೀವು ಮಠಗಳಿಗೆ ಬರೋದನ್ನು ಬಿಡಿ: ಯತ್ನಾಳ್ ವಿರುದ್ಧ ಸ್ವಾಮೀಜಿ ಆಕ್ರೋಶ..

    ವಿಜಯನಗರ: ಮಠಾಧೀಶರ ಕುರಿತು ಹಗುರವಾಗಿ ಮಾತನಾಡಿರುವ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಸ್ವಾಮೀಜಿಯವರು ಸಿಟ್ಟಾಗಿದ್ದು, ಮೊದಲು ನೀವು ಮಠಗಳಿಗೆ ಬರುವುದನ್ನು ಬಿಡಿ ಎಂಬುದಾಗಿ ಹೇಳಿದ್ದಾರೆ.

    ಬಿ.ಎಸ್​. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅವರಿಗೆ ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಮಠಾಧೀಶರನ್ನು ಟೀಕಿಸಿದ್ದಕ್ಕೆ ಯತ್ನಾಳ್ ವಿರುದ್ಧ ವಿಜಯನಗರ ಜಿಲ್ಲೆಯ ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಹಾಲಸ್ವಾಮೀಜಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ದಿಂಗಾಲೇಶ್ವರಶ್ರೀ ಅವರಿಗೆ ಮಾಡಿದ ಅವಹೇಳನವನ್ನು ಉಲ್ಲೇಖಿಸಿ ಮಾತಾಡಿರುವ ಹಾಲಸ್ವಾಮೀಜಿ, ಇದು ಯತ್ನಾಳ್ ಅವರು ಸಮಸ್ತ ಸ್ವಾಮೀಜಿಗಳಿಗೆ ಮಾಡಿರುವ ಅಪಮಾನ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

    ಮಠಾಧೀಶರು ಯಡಿಯೂರಪ್ಪನವರ ಚೇಲಾಗಳು ಎನ್ನುವ ಪದವನ್ನು ಯತ್ನಾಳ್​ ಬಳಸಿದ್ದಾರೆ. ನಿಮ್ಮನ್ನು ಪಕ್ಷದಿಂದ ಹೊರ ಹಾಕಿದಾಗ ನೀವು ಯಡಿಯೂರಪ್ಪನವರ ಚೇಲಾಗಳಾಗಿದ್ದಿಲ್ಲವೇ? ನೀವು ಚೇಲಾ ಆಗಿದ್ದಕ್ಕೆ ನಿಮಗೆ ಆ ಪರಿಕಲ್ಪನೆ ಇದೆಯಲ್ಲವೇ? ಎಂದು ಪ್ರಶ್ನಿಸಿರುವ ಹಾಲಸ್ವಾಮೀಜಿ, ಯಡಿಯೂರಪ್ಪರನ್ನು ಒಂದು ಕಾಲದಲ್ಲಿ ದೇವರು ಅಂತ ಪೂಜೆ ಮಾಡುತ್ತಿದ್ದ ನೀವೇ ಈಗ ಹಗುರವಾಗಿ ಮಾತನಾಡುವುದು ಎಷ್ಟು ಸರಿ? ಎಂದು ಕೇಳಿದ್ದಾರೆ.

    ನಾವು ಯಡಿಯೂರಪ್ಪ ಅವರನ್ನು ಬೆಂಬಲಿಸಿದ್ದೇವೆ ಎಂಬುದಕ್ಕೆ ನೀವು ಮಠಾಧೀಶರ ಬಗ್ಗೆ ಹೀಗೆ ಮಾತನಾಡಿದ್ದೀರಿ. ಮಠಾಧೀಶರನ್ನು ಹಿಡಿದು ಮಂತ್ರಿಗಳು, ಮುಖ್ಯಮಂತ್ರಿಗಳಾಗುವ ಕಾಲ ಬಂತು ಅಂತೀರಿ. ಹಾಗಾದರೆ ನೀವು ಚುನಾವಣೆಗೆ ಸ್ಪರ್ಧೆ ಮಾಡಿದಾಗ ನಿಮಗೆ ಮಠಗಳು ಬೇಕು, ಈಗ ಬೇಡ್ವಾ? ಮತ ಕೇಳುವ ಸಮಯದಲ್ಲಿ ಮಠಗಳು ಬೇಕು, ಈಗ ಮಠಗಳು ರಾಜಕಾರಣ ಮಾಡುತ್ತಿವೆ ಅಂತೀರಿ. ಮೊದಲು ನೀವು ಮಠಗಳಿಗೆ ಬರುವುದನ್ನು ಬಿಡಿ ಎಂದು ಸ್ವಾಮೀಜಿ ಹೇಳಿದ್ದಾರೆ.

    ಇದನ್ನೂ ಓದಿ: ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?

    ಹೋರಾಟದ ಸಮಯದಲ್ಲಿ ಯಡಿಯೂರಪ್ಪ ಅವರಿಂದ ಸ್ವಾಮೀಜಿಗಳು ಕಾಣಿಕೆ ಪಡೆದಿದ್ದಾರೆ ಎಂಬ ಯತ್ನಾಳ್ ಆರೋಪಕ್ಕೂ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ಹೌದು.. ಕಾಣಿಕೆ ತೆಗೆದುಕೊಂಡಿದ್ದೇವೆ ಎಂದು ನಾವು ರಾಜಾರೋಷವಾಗಿ ಹೇಳುತ್ತೇವೆ. ಶುಧ್ಧ ಮನಸ್ಸಿನ ವ್ಯಕ್ತಿಯಿಂದ ನಾವು ಕಾಣಿಕೆ ಪಡೆದಿದ್ದೇವೆ ನಿಜ. ವಿಜಯಪುರ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದಾಗ ನಿಮ್ಮ ಜಿಲ್ಲೆಯ ಮಠಾಧೀಶರು ಮನೆಮನೆಗೆ ಹೋಗಿ ಹಣ ಸಂಗ್ರಹ ಮಾಡಿ ಕೊಟ್ಟಿದ್ದು ಕಾಣಿಕೆ ಅಲ್ವಾ? ಎಂದು ಕೇಳಿದ್ದಾರೆ.

    ಮತಾಂತರ, ಲವ್ ಜಿಹಾದ್ ಬಗ್ಗೆ ಮಠಗಳು ಮಾತನಾಡಲಿ ಅಂತಿದ್ದೀರಿ. ನಾವು ಹಿಂದು ಹುಲಿ ಅಂತ ಹೇಳಿಸಿಕೊಳ್ಳಲು ಮೈಕ್ ಮುಂದೆ ಮಾತನಾಡುವುದಿಲ್ಲ. ಮಠಗಳು ಮೊದಲಿನಿಂದಲೂ ಈ ವಿಷಯಗಳ ವಿರುದ್ಧ ಮಾತನಾಡುತ್ತಿವೆ. ಸಾವಿರಾರು ಕುಟುಂಬಗಳನ್ನು ಘರ್ ವಾಪಸಿ ಮಾಡಿದ್ದ ಪರಂಪರೆ ಮಠಗಳಿಗೆ ಇವೆ. ನೀವು ಬಹಿರಂಗ ಚರ್ಚೆಗೆ ಬಂದ್ರೆ ನಾವು ಈ ಬಗ್ಗೆ ಉತ್ತರ ಕೊಡುತ್ತೇವೆ ಎಂದರು.

    ಇದನ್ನೂ ಓದಿ: ದೇಶದ ಮಹಾನ್​ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸಲಿದೆ ಈ ಬಾನುಲಿ ಸರಣಿ, ‘ಹಮಾರೇ ಸ್ವತಂತ್ರ್ಯ ತಾ ಸೇನಾನಿ’

    ಗಡ್ಡ ಬಿಟ್ರೆ ಶಿವಾಜಿ, ಗಡ್ಡ ತೆಗೆದ್ರೆ ಬಸವಣ್ಣ ಅಂತೀರಿ. ಹಿಂದೆ ಮಸೀದಿಗೆ ನೀವು ಹೋದಾಗ ಔರಂಗಜೇಬ್ ಆಗಿದ್ರಾ? ನೀವು ಈಗಲೇ ಬದಲಾದರೆ ಸರಿ. ಇಲ್ಲವಾದರೆ ರಾಜ್ಯಾದ್ಯಂತ ನಾವು ನಿಮ್ಮ ಬಗ್ಗೆ ಜನರಿಗೆ ಏನು ಸಂದೇಶ ಕೊಡಬೇಕೋ ಅದನ್ನು ಕೊಡುತ್ತೇವೆ ಎಂದು ಹಾಲಸ್ವಾಮೀಜಿ ಹೇಳಿದ್ದಾರೆ.

    ‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

    ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts